ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗೆ ಹೊನಲಿನ ನಾಟಕ

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ರಂಗಭೂಮಿ ಚಲನಶೀಲ. ಅದರಲ್ಲೂ ಹವ್ಯಾಸಿ ರಂಗಭೂಮಿ ನಿರಂತರ ಚಟುವಟಿಕೆಗಳ ಆಗರ. ಹೀಗಾಗಿಯೇ ರಂಗಾಸಕ್ತರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.
 
ಈ ನಿಟ್ಟಿನಲ್ಲಿ ಹಲವಾರು ರಂಗತಂಡಗಳು ರಂಗ ಪ್ರಯೋಗಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿವೆ. ಇವುಗಳಲ್ಲಿ ಸಂಜಯ ನಗರದ ರಂಗಾಭರಣ ಕಲಾಕೇಂದ್ರವು ಒಂದು.

ಎರಡು ದಶಕಗಳಿಂದ ಅನೇಕ ರಂಗಚಟುವಟಿಕೆ ನಡೆಸಿಕೊಂಡು ಬರುತ್ತಿರುವ ಈ ಕೇಂದ್ರವು ನಡೆಸಿದ `ರಂಗಾಭರಣ ಹಾಸ್ಯ ನಾಟಕೋತ್ಸವ~ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಯಶಸ್ವಿಯಾಯಿತು.

ಐದು ದಿನಗಳ ಈ ಉತ್ಸವದಲ್ಲಿ ಗೆಳೆಯರ ಬಳಗ ತಂಡದಿಂದ `ಗೋಕರ್ಣದ ಗೌಡಶಾನಿ (ನಿರ್ದೇಶನ: ಅಶೋಕ ಬಾದರದಿನ್ನಿ, ರಚನೆ: ಚಂದ್ರಶೇಖರ ಪಾಟೀಲ್), ರಂಗ ಮಿತ್ರರು ತಂಡದಿಂದ `ಮದ್ವೆ ಮದ್ವೆ~, ನಾಟ್ಯರಾಣಿ ಶಾಂತಲಾ ಕನ್ನಡ ಬಳಗ ತಂಡದಿಂದ ಪಳೆಂಕರರು, ರಂಗಾಭರಣ ತಂಡದದಿಂದ `ಸನ್ಮಾನ ಸುಖ~ ಹಾಗೂ ರೂಪಾಂತರ ತಂಡದಿಂದ `ಗಲ್ಬಸ್ಕಿ~ ನಾಟಕಗಳು ಪ್ರದರ್ಶನಗೊಂಡವು.

ಇದೇ ಸಂದರ್ಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಕೆಂಪೇಗೌಡ ಪ್ರಶಸ್ತಿ ಪಡೆದ ಎ.ಎಸ್. ಮಹೇಶ್ವರಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT