ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೆಹಲಿಯಲ್ಲಿ ಥಾಮಸ್ ಕಪ್, ಉಬೆರ್ ಕಪ್

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಬ್ಲ್ಯುಎಫ್) ಆಯೋಜಿಸುವ ಪ್ರತಿಷ್ಠಿತ ಟೂರ್ನಿಗಳಾದ `ಥಾಮಸ್ ಕಪ್' ಮತ್ತು `ಉಬೆರ್ ಕಪ್'ನ ಫೈನಲ್ ಪಂದ್ಯಗಳು ಮುಂದಿನ ವರ್ಷ ಇಲ್ಲಿ ನಡೆಯಲಿರುವುದು ಖಚಿತವಾಗಿದೆ.

ಭಾರತ ಈ ಎರಡು ಟೂರ್ನಿಗಳ ಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸುವ ಸಾಧ್ಯತೆ ಇದೆ ಎಂದು ಸೋಮವಾರ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ (ಬಿಎಐ) ಅಧ್ಯಕ್ಷ ಅಖಿಲೇಶ್ ದಾಸ್ ಗುಪ್ತಾ ಹೇಳಿದ್ದರು. ಪಂದ್ಯ ಆಯೋಜನೆಗೆ ಲಖನೌ ಮತ್ತು ಹೈದರಾಬಾದ್ ನಗರಗಳನ್ನೂ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಡಬ್ಲ್ಯುಎಫ್ ಅಧಿಕಾರಿಯೊಬ್ಬರು, `ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದಾಗ ಭಾರತವು ಪಂದ್ಯ ಆಯೋಜನೆಗೊಳ್ಳಲಿರುವ ನಗರದ ಹೆಸರನ್ನೂ ಉಲ್ಲೇಖಿಸಿತ್ತು. ಸೂಪರ್ ಸರಣಿಯ ಹರಾಜಿನಲ್ಲೂ ಇದೇ ರೀತಿ ಮಾಡಲಾಗಿತ್ತು. ಟೂರ್ನಿಗಳ ಬಗ್ಗೆ ಅಧಿಕೃತ ಪ್ರಕಟಣೆ ಸದ್ಯದಲ್ಲೇ ಹೊರಬೀಳಲಿದೆ' ಎಂದರು.

ಥಾಮಸ್ ಕಪ್ ಟೂರ್ನಿಯು (ಪುರುಷರ ವಿಶ್ವ ತಂಡ ಚಾಂಪಿಯನ್‌ಷಿಪ್)1948-49ರಲ್ಲೂ, ಉಬೆರ್ ಕಪ್ (ಮಹಿಳೆಯರ ವಿಶ್ವ ತಂಡ ಚಾಂಪಿಯನ್‌ಷಿಪ್) 1956-57ರಲ್ಲಿ ಆರಂಭಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT