ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿದ್ದು ಜೆಡಿಎಸ್‌ ಮುಖ್ಯಸಚೇತಕ, ಉಪನಾಯಕ ಆಯ್ಕೆ

Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಉಪ ನಾಯಕನ ಆಯ್ಕೆ ಬಗ್ಗೆ ಮಂಗಳವಾರ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಜೆಡಿಎಸ್‌ ಶಾಸಕರ ಸಭೆ ಮಂಗಳವಾರ ನಡೆಯಲಿದ್ದು, ಒಮ್ಮತ ಮೂಡಿದರೆ ಆ ದಿನವೇ ಆಯ್ಕೆ ಮಾಡಲಾಗುವುದು ಎಂದು ವಿರೋಧ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ಶಾಸಕರಾದ ಮಧು ಬಂಗಾರಪ್ಪ, ವೈ.ಎಸ್‌.ವಿ. ದತ್ತ, ಮಲ್ಲಿಕಾರ್ಜುನ ಖೂಬಾ, ಜಮೀರ್‌ ಅಹ್ಮದ್‌, ಎಚ್‌.ಎಸ್. ಶಿವಶಂಕರ್‌, ಸಾ.ರಾ. ಮಹೇಶ್‌ ಹೆಸರು ಗಳು ಮುಖ್ಯ ಸಚೇತಕರ ಸ್ಥಾನಕ್ಕೆ ಕೇಳಿ ಬರುತ್ತಿವೆ.

ಮಧು ಬಂಗಾರಪ್ಪ ಆಯ್ಕೆ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಮೂಲಗಳು ತಿಳಿಸಿವೆ.

ವಿರೋಧ ಪಕ್ಷದ ಮುಖ್ಯಸಚೇತಕರಿಗೆ ಸಚಿವರ ಸ್ಥಾನಮಾನ ಇರುವುದರಿಂದ ಸಹಜವಾಗಿಯೇ ಪೈಪೋಟಿ ಜೋರಾಗಿದೆ. ಇದರಿಂದಾಗಿಯೇ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಮುಖ್ಯಸಚೇತಕ ಹಾಗೂ ಉಪ ನಾಯಕನ ಆಯ್ಕೆ ಕೂಡಲೇ ನಡೆಯಬೇಕು, ಮತ್ತಷ್ಟು ವಿಳಂಬಬೇಡ ಎಂಬ ಇಂಗಿತವನ್ನು ಕುಮಾರ ಸ್ವಾಮಿ ಆಪ್ತ ಶಾಸಕರ ಬಳಿ ವ್ಯಕ್ತಪಡಿಸಿದ್ದಾರೆ.
ಎಚ್‌.ಕೆ. ಕುಮಾರಸ್ವಾಮಿ ಅಥವಾ ಅಲ್ಪಸಂಖ್ಯಾತ ಸಮುದಾಯದ ಶಾಸಕರೊಬ್ಬರು ಉಪ ನಾಯಕರಾಗ ಬಹುದು ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT