ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಸಲ್ಲಿಕೆ ಇಂದು ಆರಂಭ

Last Updated 10 ಏಪ್ರಿಲ್ 2013, 8:15 IST
ಅಕ್ಷರ ಗಾತ್ರ

ತರೀಕೆರೆ: ವಿಧಾನ ಸಭಾ ಚುನಾವಣೆಯ  ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬುಧವಾರದಿಂದ ಪ್ರಾರಂಭವಾಗಲಿದೆ ಎಂದು ಚುನಾವಣಾಧಿಕಾರಿ ಜಿ. ಅನುರಾಧಾ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 17ರ ವರೆಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ  ಉಪವಿಭಾಗಾಧಿಕಾರಿ ನ್ಯಾಯಾ ಲಯ ಸಭಾಂಗಣದಲ್ಲಿ  ನಾಮಪತ್ರ ಸ್ವೀಕರಿಸ ಲಾಗುವುದು  ಎಂದರು.

ನಾಮಪತ್ರ ಅರ್ಜಿ ನಮೂನೆಗಳನ್ನು ಉಪವಿಭಾಗಾಧಿಕಾರಿ ಕಚೇರಿಯಲ್ಲಿ  ಬುಧವಾ ದಿಂದಲೇ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ತಾಲ್ಲೂಕಿನಲ್ಲಿ ಒಟ್ಟು 219 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 32 ಅತಿಸೂಕ್ಷ್ಮ , 97 ಸೂಕ್ಷ್ಮ , 90 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಚುನಾವಣಾ ಅಕ್ರಮ ತಡೆಯುವ ಸಲುವಾಗಿ ತಾಲ್ಲೂಕಿನ  ಅಜ್ಜಂಪುರ, ಎಂ.ಸಿ.ಹಳ್ಳಿ, ಲಕ್ಕವಳ್ಳಿ ಮತ್ತು ಬುಕ್ಕಾಂಬುದಿ ಗಡಿಗಳಲ್ಲಿ ಸ್ಥಿರ ಕಣ್ಗಾವಲು  ಪಡೆಯನ್ನು ಸ್ಥಾಪಿಸಲಾಗಿದೆ. 

ತರೀಕೆರೆ ಕ್ಷೇತ್ರದಲ್ಲಿ  ಹೊಸದಾಗಿ ಸೇರ್ಪಡೆಗಾಗಿ ಈಗಾಗಲೇ 6500 ಅರ್ಜಿಗಳು, ಮತದಾರರ ಪಟ್ಟಿಯಿಂದ ಕೈಬಿಡುವಂತೆ 1,734 ಅರ್ಜಿಗಳು ಬಂದಿದ್ದು, ಇವುಗಳನ್ನು  ಈಗಾಗಲೇ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದ್ದು ಅವು ಬಂದ ನಂತರ  ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಚುನಾವಣಾ ಪ್ರಕ್ರಿಯೆ ಸುಗಮವಾಗಿ ನಡೆಯುವ ಸಲುವಾಗಿ ಒಂದು ಮತಗಟ್ಟೆಗೆ  4+1 ರಂತೆ ಒಟ್ಟು 5 ಜನರನ್ನು ನಿಯೋಜಿಸಲಾಗುವುದು . ಈ ತಾಲ್ಲೂಕಿನ ನೌಕರರನ್ನು ಹೊರ ತಾಲ್ಲೂಕಿಗೆ ಚುನಾವಣಾ ಕಾರ್ಯಕ್ಕೆ ನಿಯೋಜಿಸುವ ವ್ಯವಸ್ಥೆ ಮಾಡಲಾಗಿದೆ. ಶೇ.20 ರಷ್ಟು ನೌಕರರನ್ನು  ಹಾಗೂ ಮತಯಂತ್ರಗಳನ್ನು   ಹೆಚ್ಚುವರಿಯಾಗಿ ಚುನಾವಣಾ ಕಾರ್ಯಕ್ಕೆ ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗಿದೆ.  ಪ್ರತಿ ಹೋಬಳಿಗೆ ಎರಡರಂತೆ ಒಟ್ಟು 12 ಎಂಸಿ.ಸಿ ದಳವನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಅಭ್ಯರ್ಥಿಗಳಿಗೆ  ತೊಂದರೆ ಆಗಬಾರದೆಂಬ ಉದ್ದೇಶದಿಂದ ವಿವಿಧ ಚುನಾವಣಾ ಪ್ರಚಾರಕ್ಕಾಗಿ ಪರವಾನಿಗೆ ನೀಡುವ ಕುರಿತಂತೆ ಏಕಗವಾಕ್ಷಿ ಯೋಜನೆ ಯನ್ನು ತಾಲ್ಲೂಕು ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು , ಇದರಲ್ಲಿ ಕಂದಾಯ, ಪೊಲೀಸ್, ತಾಲ್ಲೂಕು ಪಂಚಾಯಿತಿ ಮತ್ತು ಪುರಸಭೆಯ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಪ್ರತ್ಯಕ್ಷವಾಗಿ  ಇಲ್ಲವೇ ಪರೋಕ್ಷವಾಗಿ ಬಾಗಿಯಾದ ಯಾವುದೇ  ನೌಕರ, ಅಧಿಕಾರಿ ವಿರುದ್ಧ ದೂರುಗಳು ಬಂದಲ್ಲಿ ಅವರ ಬಗ್ಗೆ ಕಠಿಣ ಕ್ರಮ ಜರುಗಿಸಲಾಗುವುದು. ಚುನಾವಣೆಗೆ ಸಂಬಂಧ ಪಟ್ಟ ಮಾಹಿತಿ ನೀಡಲು ಎಲ್ಲಾ ಪಕ್ಷಗಳ ಪ್ರತಿನಿಧಿಗಳ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಚುನಾವಣಾಧಿಕಾರಿ ಎಂ.ಪಿ ರಂಜಿತ , ಚುನಾವಣಾ  ನಾಮಪತ್ರ ನೋಡಲ್ ಅಧಿಕಾರಿ ಸದಾನಂದ ಬಿ. ನಾಯಕ್    ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT