ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣಪುರ: ರಘೋತ್ತಮ ತೀರ್ಥರ ಆರಾಧನೆ

Last Updated 7 ಜನವರಿ 2012, 10:20 IST
ಅಕ್ಷರ ಗಾತ್ರ

ಹುಣಸಗಿ: ಕೃಷ್ಣೆಯ ತಟದಲ್ಲಿರುವ ನಾರಾಯಣಪುರದಲ್ಲಿ ರಘೋತ್ತಮ ತೀರ್ಥರ  ಆರಾಧನಾ ಮಹೊತ್ಸವವನ್ನು ರಾಘವೇಂದ್ರ ಸ್ವಾಮಿ ಮಠದಲ್ಲಿ ಬಹು ವಿಜ್ರಂಬಣೆಯಿಂದ ಆಚರಿಸಲಾಯಿತು.

ಗುರುಗಾರ ಬೆಳಿಗ್ಗೆ ವೈಕುಂಠ ಎಕಾದಶಿ ನಿಮಿತ್ಯ ಸುಪ್ರಭಾತ, ರಾಘವೇಂದ್ರ ಸ್ವಾಮಿಗಳ ಅಷ್ಟೊತ್ತರ ಪಠಣ, ನಂತರ ರಘೋತ್ತಮ ತೀರ್ಥರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಮಹಾಪೂಜೆ, ಮಂಗಳಾರತಿ ನಡೆಯಿತು.

ಗುರುವಾರ ಸಾಯಂಕಾಲ ಪಂಡಿತ ಪ್ರಹಲ್ಲಾಚಾರ್ಯ ಗಂಗಾವತಿ ಅವರು ಪ್ರವಚನ ನೀಡುತ್ತಾ ವಿಪ್ರರಾಗಿ ಹುಟ್ಟಿದ ಮೇಲೆ ನಿತ್ಯ ಆನ್ಯೇಕದಲ್ಲಿ ತೋಡಗಬೇಕು. ತ್ರಿಕಾಲದಲ್ಲಿ ಭಗವಂತನ ನಾಮಸ್ಮರಣೆ ಮಾಡಬೇಕು. ಆಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ದೇವರ ನಾಮ ಸ್ಮರಣೆಯಿಂದ ಮಾತ್ರ ನೆಮ್ಮದಿಯ ಬದುಕು ನಡೆಸಲು ಸಾಧ್ಯ ಎಂದು ತಿಳಿಸಿದರು.

ರಾತ್ರಿ ನಾರಾಯಣಪುರ ಗುರುರಾಜ ಭಜನಾ ಮಂಡಳಿಯಿಂದ ಭಜನೆ, ದಾಸವಾಣಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಶುಕ್ರವಾರ ಬೆಳಿಗ್ಗೆ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಾಘವೇಂದ್ರಾಚಾರ್ಯ ಮಾರಲಬಾವಿ, ನರಸಿಂಹಾಚಾರ್ಯ ಕೊಳ್ಳಿ, ವಿಜಯಾಚಾರ್ಯ ಜೋಶಿ, ಡಾ.ಸುರೇಶ ಆದವಾನಿ, ಮೋಹನ ಕುಲಕರ್ಣಿ, ಸತೀಶ ಪದಕಿ, ಗುರುರಾಜ ಕೊಳ್ಳಿ ಸೇರಿದಂತೆ ನೂರಾರು ವಿಪ್ರ ಬಾಂಧವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT