ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರಿಗೆ ‘ರೈಟ್‌ ಲೈವ್ಲಿ ಹುಡ್‌’ ಪ್ರಶಸ್ತಿ

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸ್ಟಾಕ್‌ಹೋಂ (ಎಎಫ್‌ಪಿ): ಅಮೆರಿಕದ ಪಾಲ್‌ ವಾಕರ್‌, ಪ್ಯಾಲೆಸ್ಟೈನ್‌ನ ರಾಜಿ ಸೌರಾನಿ, ಕಾಂಗೋದ ಡೆನಿಸ್‌ ಮುಕ್ವೆಗೆ ಹಾಗೂ ಸ್ವೀಡನ್‌ನ ಹನ್ಸ್‌ ರುಡಾಲ್ಫ್‌ ಹರೆನ್‌ ಅವ­ರು ನೊಬೆಲ್‌ಗೆ ಪರ್ಯಾಯ­ವೆಂದು ಪರಿ­ಗಣಿ­ಸಲಾದ ಪ್ರತಿಷ್ಠಿತ ‘ದಿ ಸ್ವೀಡಿಸ್‌ ರೈಟ್‌ ಲೈವ್ಲಿ ಹುಡ್‌’ ಪ್ರಶಸ್ತಿಗೆ ಭಾಜನ­ರಾಗಿದ್ದಾರೆ.

ಪೌಲ್‌ ರಾಸಾ­ಯ­ನಿಕ ಅಸ್ತ್ರ ವಿರೋಧಿ ಹೋರಾಟ­ಗಾರರು, ರಜಿ ಮಾನವ ಹಕ್ಕು­ಗಳ ಹೋರಾಟ­ಗಾರ್ತಿ, ಡೆನಿಸ್‌ ಶಸ್ತ್ರಚಿಕಿತ್ಸ­ಕರು ಹಾಗೂ ಹನ್‌ಸ ಆಹಾರ ಭದ್ರತಾ ಪರಿಣಿತರು. ಈ ನಾಲ್ವರು ಪ್ರಶ­ಸಿ್ತಯ ಮೊತ್ತ 20 ಲಕ್ಷ ಕ್ನೊನಾರ್‌ ಅನ್ನು (ಅಂದಾಜು ` 1.93 ಕೋಟಿ) ಸಮಾನ ಹಂಚಿ­ಕೊಳ್ಳಲಿದ್ದಾರೆ.

ಡಿ.2ರಂದು ಸ್ವೀಡನ್‌ ಸಂಸತ್‌­ನಲ್ಲಿ ನಡೆಯುವ ಕಾರ್ಯಕ್ರಮ­ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗು­ತ್ತದೆ ಎಂದು ಪ್ರತಿಷ್ಠಾನ ತಿಳಿಸಿದೆ.
ಸ್ವೀಡಿಸ್‌– ಜರ್ಮನ್‌ ಸ್ಟ್ಯಾಂಪ್‌ ಸಂಗ್ರಹಕಾರ ಜಾಕೊಬ್‌ ವೊನ್‌ ಉಕ್ಷ ಕುಲ್‌ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT