ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಆಟೊ ಚಾಲಕರ ಮುಷ್ಕರ

Last Updated 4 ಜನವರಿ 2014, 20:04 IST
ಅಕ್ಷರ ಗಾತ್ರ

ಬೆಂಗಳೂರು: ಆಟೊ ಎಲ್‌ಪಿಜಿ ಗ್ಯಾಸ್‌ ದರವನ್ನು ಇಳಿಕೆ ಮಾಡಬೇಕೆಂದು ಒತ್ತಾಯಿಸಿ ಭಾನುವಾರ ಮಧ್ಯರಾತ್ರಿ­ಯಿಂದ (ಜ.6) ಸೋಮವಾರ ಮಧ್ಯ­ರಾತ್ರಿವರೆಗೆ 24 ಗಂಟೆ ಮುಷ್ಕರಕ್ಕೆ ಆಟೊರಿಕ್ಷಾ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯು ಕರೆ ನೀಡಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ­ನಾಡಿದ ಸಮಿತಿಯ ಅಧ್ಯಕ್ಷ ಎಂ.ಮಂಜುನಾಥ್‌ ಅವರು, ‘ಆಟೊ ಎಲ್‌ಪಿಜಿ ದರವು ಪ್ರತಿ ಲೀ. ಗೆ ರೂ. 54.58 ಇದ್ದಾಗ ಆಟೊ ಮೀಟರ್ ದರವನ್ನು ಪರಿಷ್ಕರಣೆ ಮಾಡಲಾ­ಗಿತ್ತು. ಕನಿಷ್ಠ ದರ ರೂ. 25 ಮತ್ತು ಪ್ರತಿ ಕಿ.ಮೀ.ಗೆ ರೂ. 13 ನಿಗದಿಯಾಗಿತ್ತು. ಆದರೆ, ಸರ್ಕಾರವು ಈಗ ಏಕಾಏಕಿ ಆಟೊ ಎಲ್‌ಪಿಜಿ ದರವನ್ನು ಪ್ರತಿ ಲೀ. ಗೆ ರೂ. 11.14 ರಂತೆ ಏರಿಕೆ ಮಾಡಿರು­ವುದು ಸರಿಯಲ್ಲ’ ಎಂದರು.

‘ಚಾಲಕರ ಬದುಕು ಇಂದಿನ ಬೆಲೆ ಏರಿಕೆ­ಯಲ್ಲಿ ಕಷ್ಟವಾಗಿರುವಾಗ ಪ್ರತಿ ಲೀ.ಗೆ ರೂ. 11.14 ಏರಿಸಿ ಸರ್ಕಾರ ಅನ್ಯಾಯ ಮಾಡುತ್ತಿದೆ’ ಎಂದರು.

‘ಏರಿಸಿರುವ ಆಟೊ ಎಲ್‌ಪಿಜಿ ದರವನ್ನು ಸರ್ಕಾರ ಈ ಕೂಡಲೇ ಇಳಿಕೆ ಮಾಡಿ, ಗ್ಯಾಸ್‌ ದರವನ್ನು ನಿಯಂತ್ರಿಸ­ಬೇಕು. ಜ.6 ರಂದು ಸ್ವಾತಂತ್ರ್ಯ ಉದ್ಯಾನ­ದಲ್ಲಿ ಸಭೆ ಸೇರಿ ಮುಖ್ಯ­ಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಲಾಗುವುದು. ಎಲ್‌ಪಿಜಿ ದರವನ್ನು ಕಡಿಮೆಗೊಳಿಸ­ದಿದ್ದಲ್ಲಿ ಅನಿರ್ದಿಷ್ಟಾವ­ಧಿಯವರೆಗೆ ಮುಷ್ಕರ ಹೂಡಲಾಗುವುದು’ ಎಂದು ಎಚ್ಚರಿಸಿದರು.

ಸಂಚಾರ ಪೊಲೀಸರು ಆಟೊ ಚಾಲ­ಕರ ಮೇಲೆ ದಾಖಲಿಸಿರುವ ಪ್ರಕರ­ಣಗ­ಳನ್ನು ರದ್ದುಪಡಿಸಬೇಕು. ಎಲ್ಲಾ ಆಟೊ ಚಾಲಕರಿಗೆ ಬಿಡಿಎ, ಹೌಸಿಂಗ್‌ ಬೋರ್ಡ್‌ನಿಂದ ವಾಸದ ಮನೆಗಳನ್ನು ನೀಡಲು ಯೋಜನೆ ರೂಪಿಸಬೇಕು ಇನ್ನು ಮುಂತಾದ ಬೇಡಿಕೆಗಳನ್ನು ಈಡೇರಿ­ಸುವಂತೆ ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT