ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಮಹಲಿಂಗ ರಂಗ ಪ್ರಶಸ್ತಿ ಪ್ರದಾನ ಸಮಾರಂಭ

Last Updated 15 ಡಿಸೆಂಬರ್ 2012, 6:22 IST
ಅಕ್ಷರ ಗಾತ್ರ

ದಾವಣಗೆರೆ: ಗೌರಮ್ಮ ಪಿ. ಮೋತಿ ರಾಮರಾವ್ ಚಾರಿಟಬಲ್ ಟ್ರಸ್ಟ್ ಸ್ಥಾಪಿತ `ಮಹಲಿಂಗ ರಂಗ' ಜಿಲ್ಲಾ ಸಾಹಿತ್ಯ ಪ್ರಶಸ್ತಿ ಹಾಗೂ `ಗ್ರಾಮೀಣ ಸಿರಿ' ಪ್ರಶಸ್ತಿ ಪ್ರದಾನ ಸಮಾರಂಭ ಡಿ. 16ರಂದು ನಗರದಲ್ಲಿ ನಡೆಯಲಿದೆ.

ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಅಂದು ಸಂಜೆ 5.30ಕ್ಕೆ ಕುವೆಂಪು ಕನ್ನಡ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ `ಮಹಲಿಂಗ ರಂಗ' ಪ್ರಶಸ್ತಿಯನ್ನು ಜಾನಪದ ತಜ್ಞ ಹಾಗೂ ಲೇಖಕ ಡಾ.ಎಂ.ಜಿ. ಈಶ್ವರಪ್ಪ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್. ಉಜ್ಜನಪ್ಪ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ದಾವಣಗೆರೆ ತಾಲ್ಲೂಕು ಹಿಂಡಸಘಟ್ಟದ ಎಚ್. ಮಲ್ಲೇಶಪ್ಪ (ಭಜನೆ), ಮಾಯಕೊಂಡದ ಚಿರಡೋಣಿ ಲಕ್ಷ್ಮಮ್ಮ (ಬೆಡಗಿನ ಪದಗಳು). ಹರಿಹರ ತಾಲ್ಲೂಕು ಅಮರಾವತಿಯ ಸುಖಮುನಿ (ಸಾಹಿತ್ಯ ಸೇವೆ), ಆಲಿಸಾ ಸಾಲೋಮನ್ (ಗ್ರಾಮೀಣ ಸಾಕ್ಷರತೆ). ಹರಪನಹಳ್ಳಿ ತಾಲ್ಲೂಕು ಕನಕನ ಬಸಾಪುರದ ಸುತ್ತೂರು ಇಮಾಮ್‌ಸಾಬ್ (ರಿಯಾಯಿತಿ ಪದಗಳು), ಶೃಂಗಾರ ತೋಟದ ಎರಡೆತ್ತಿನ ಸಾವಿತ್ರಮ್ಮ (ಜನಪದ ಕಲಾವಿದೆ), ಚನ್ನಗಿರಿ ತಾಲ್ಲೂಕು ದೇವರಹಳ್ಳಿ ಕೆಂಚಮ್ಮ (ಕೋಲಾಟ ಪದಗಳು), ಕಗತೂರು ಮಲ್ಲೇಶಪ್ಪ (ರಂಗಗೀತೆ- ಲಾವಣಿ ಪದಗಳು).

ಹೊನ್ನಾಳಿ ತಾಲ್ಲೂಕು ಕುಂದೂರಿನ ಭರಮಮ್ಮ (ಸಂಪ್ರದಾಯದ ಹಾಡುಗಳು), ಕ್ಯಾಸಿನಕೆರೆ ಬಸವರಾಜಪ್ಪ (ಆಶು ಕವಿ), ಜಗಳೂರು ತಾಲ್ಲೂಕು ಗುರುಸಿದ್ದಾಪುರದ ಔಡಪ್ಪ (ಹಾರ‌್ಮೋನಿಯಂ ಮೇಷ್ಟ್ರು), ಬಸಮ್ಮ ಮುಚ್ಚನೂರು (ಸೋಬಾನೆ ಪದ) ಅವರಿಗೆ `ಗ್ರಾಮೀಣ ಸಿರಿ' ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.

ವಿಮರ್ಶಕ ಡಾ.ಕೆ. ಮರುಳಸಿದ್ದಪ್ಪ `ಮಹಲಿಂಗ ರಂಗ' ಪ್ರಶಸ್ತಿ ಪ್ರದಾನ ಮಾಡಲಿದ್ದು, ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ `ಗ್ರಾಮೀಣ ಸಿರಿ' ಪ್ರಶಸ್ತಿ ಪ್ರದಾನ ಮಾಡುವರು. ಜಿಲ್ಲಾ ಪಂಚಾಯ್ತಿ ಸಿಇಒ ಎ.ಬಿ. ಹೇಮಚಂದ್ರ, ಮೋತಿ ಪಿ. ರಾಮರಾವ್, ಪ್ರೊ.ಎಸ್.ಎಚ್. ಪಟೇಲ್, ಬಿ.ಎನ್. ಮಲ್ಲೇಶ್, ಪದ್ಮಜಾ ಶೇಷಗಿರಿರಾವ್, ಪ್ರೊ.ಬಿ.ವಿ. ವೀರಭದ್ರಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಿ.ಕೆ. ದಿನೇಶ್ ಬಾಡಾ, ನಾಗಭೂಷಣ್ ತೌಡೂರು, ಬಾ.ಮ. ಬಸವರಾಜಯ್ಯ, ಎಂ.ಪಿ. ಚಂದ್ರಪ್ಪ, ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT