ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಅಣ್ಣಾ ಮೌನವ್ರತ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರು ತಮ್ಮ ಹುಟ್ಟೂರಾದ ರಾಳೆಗಣಸಿದ್ಧಿಯಲ್ಲಿ ಸೋಮವಾರದಿಂದ (ಅ.17) ಆತ್ಮಶಾಂತಿಗಾಗಿ `ಮೌತವ್ರತ~ ಆರಂಭಿಸಲಿದ್ದಾರೆ ಎಂದು ಅಣ್ಣಾ ನಿಕಟವರ್ತಿಯೊಬ್ಬರು ಶನಿವಾರ ತಿಳಿಸಿದ್ದಾರೆ. 

 ಪ್ರಬಲ ಲೋಕಪಾಲ್ ಮಸೂದೆಗಾಗಿ ಅಣ್ಣಾ ವರು ದೆಹಲಿಯಲ್ಲಿ ಸತತ 12 ದಿನಗಳ ಉಪವಾಸ ಸತ್ಯಾಗ್ರಹದ ಬಳಿಕ ನಿರಂತರವಾಗಿ ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಇದರಿಂದ ಅವರು ಬಳಲಿದ್ದಾರೆ. ಅವರಿಗೆ ತುಸು ವಿಶ್ರಾಂತಿ ಬೇಕಿದೆ. ಆದ ಕಾರಣ ಅವರು `ಮೌನವ್ರತ~ದ ಮೊರೆ ಹೋಗಲಿದ್ದಾರೆ ಎಂದು ಭ್ರಷ್ಟಾಚಾರ ವಿರುದ್ಧ ಭಾರತದ ಕಾರ್ಯಕರ್ತ ಶ್ಯಾಂ ಅಸ್ವಾ ಹೇಳಿದ್ದಾರೆ.

`ಬೆದರಿಕೆ ಕರೆ ಬರುತ್ತಿದೆ~
ರಾಳೆಗಣ ಸಿದ್ಧಿ(ಐಎಎನ್‌ಎಸ್):
ಭ್ರಷ್ಟಾಚಾರ ವಿರೋಧಿ ಹೋರಾಟಗಾರರಿಗೆ ಬೆದರಿಕೆ ಕರೆಗಳು ಮತ್ತು ಎಸ್‌ಎಂಎಸ್‌ಗಳು ಬರುತ್ತಿವೆ ಎಂದು ಅಣ್ಣಾ ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
 ಈ ಬಗ್ಗೆ ಅಣ್ಣಾ ತಂಡದ ಇತರ ಸದಸ್ಯರೊಂದಿಗೆ ಚರ್ಚಿಸಿದ್ದು, ಯಾವುದೇ  ಪ್ರತೀಕಾರ ತೆಗೆದುಕೊಳ್ಳಬಾರದು ಎಂದು ತೀರ್ಮಾನಿಸಲಾಗಿದೆ~ ಎಂದಿದ್ದಾರೆ.

ಅಣ್ಣಾ ಹೇಳಿಕೆಗೆ ಖಂಡನೆ
ಶ್ರೀನಗರ(ಪಿಟಿಐ):
ಜಮ್ಮು ಕಾಶ್ಮೀರ ವಿಷಯ ಕುರಿತ ಅಣ್ಣಾ ಹಜಾರೆ ಅವರ ಹೇಳಿಕೆಯನ್ನು ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿ ಸಂಘಟನೆಯ ಮಹಮ್ಮದ್ ಯಾಸಿನ್ ಮಲ್ಲಿಕ್ ತೀಕ್ಷ್ಣವಾಗಿ ಖಂಡಿಸಿದ್ದಾರೆ. ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಲ್ಲಿಕ್ ಅಣ್ಣಾ ಅವರ ಈ ಹೇಳಿಕೆ ಅವರ ಬೌದ್ಧಿಕ ದಿವಾಳಿಗೆ ಉದಾಹರಣೆ ಎಂದಿದ್ದಾರೆ.

`ಭೂಷಣ್ ಅವರನ್ನು ತಂಡದಿಂದ  ಹೊರಹಾಕಿ~
ಚಂಡೀಗಢ (ಪಿಟಿಐ):
ಕಾಶ್ಮೀರ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ಪ್ರಶಾಂತ್ ಭೂಷಣ್ ಅವರನ್ನು ತಂಡದಿಂದ ಹೊರಕ್ಕೆ ಹಾಕುವಂತೆ ಅಖಿಲ ಭಾರತ ಭಯೋತ್ಪಾದನಾ ನಿಗ್ರಹ ರಂಗದ (ಎಐಎಟಿಎಫ್) ಅಧ್ಯಕ್ಷ ಎಂ.ಎಸ್.ಬಿಟ್ಟಾ ಶನಿವಾರ ಅಣ್ಣಾ ಹಜಾರೆ ಅವರನ್ನು ಆಗ್ರಹಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಜನಮತಗಣನೆ ನಡೆಸುವಂತೆ ಹೇಳಿಕೆ ನೀಡಿದ ಭೂಷಣ್ ವಿರುದ್ಧ ರಾಷ್ಟ್ರದ್ರೋಹ ಎಸಗಿದ ಪ್ರಕರಣ ದಾಖಲಿಸುವಂತೆ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT