ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಏಳು ದಿನ ಆಕಾಶವಾಣಿ ಹಬ್ಬ

Last Updated 10 ಫೆಬ್ರುವರಿ 2012, 19:20 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಆಕಾಶವಾಣಿಯು ಏಳು ದಿನಗಳ ನಿರಂತರವಾದ `ಆಕಾಶವಾಣಿ ಹಬ್ಬ~ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ನಿಲಯದ ಉಪ ನಿರ್ದೇಶಕ ಡಾ.ಚೇತನ್ ಎಸ್.ನಾಯಕ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಇದೇ 12 ರಿಂದ 17 ರವರೆಗೆ ಮತ್ತು ರಾಮನಗರದ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲೂ ಸತತವಾಗಿ ಕಾರ್ಯಕ್ರಮಗಳು ನಡೆಯಲಿವೆ~ ಎಂದರು.
`ಕಾರ್ಯಕ್ರಮದಲ್ಲಿ ಶಾಸ್ತ್ರೀಯ, ಜನಪದ, ಪಾಶ್ಚಾತ್ಯ ಸಂಗೀತ, ನಾಟಕ ಹಾಗೂ ಬಹುಭಾಷಾ ಕವಿ ಸಮ್ಮೇಳನಗಳನ್ನು ಒಳಗೊಂಡ  ಸಾಸ್ಕೃತಿಕ ವೈಭವದ ಕಾರ್ಯಕ್ರಗಳು ನಡೆಯಲಿವೆ~ ಎಂದು ಮಾಹಿತಿ ನೀಡಿದರು.

`ಆಕಾಶವಾಣಿಯ 13 ಕೇಂದ್ರಗಳಲ್ಲಿ ಏಕಕಾಲದಲ್ಲಿ  ಕಾರ್ಯಕ್ರಗಳು ನಡೆಯಲಿದ್ದು, ಆಸಕ್ತರಿಗೆ ಹಬ್ಬದೂಟವನ್ನು ನೀಡಲಿವೆ~ ಎಂದು ಹೇಳಿದರು.ಫೆಬ್ರುವರಿ 12 ರಂದು ಸಂಜೆ 5.30 ಕ್ಕೆ ಸಂಗೀತಜ್ಞ ಪ್ರೊ.ಆರ್. ವಿಶ್ವೇಶ್ವರನ್ ಉದ್ಘಾಟಿಸಲಿದ್ದಾರೆ. ಸಂಜೆ 6 ಕ್ಕೆ ಡಿ.ಬಾಲಕೃಷ್ಣ, ಗೀತಾ ರಮಾನಂದ್, ರೇವತಿ ಮೂರ್ತಿ, ಮಂಜುಳಾ ಸುರೇಂದ್ರ ಮತ್ತು ವಾಣಿ ಯದುನಂದನ್ ಅವರಿಂದ ಪಂಚ ವೀಣಾ ವಾದನವಿದೆ. ಸಂಜೆ 7 ಕ್ಕೆ ಎಸ್. ಸೌಮ್ಯ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನವಿದೆ. ನಳಿನಾ ಮೋಹನ್ (ವಯೊಲಿನ್), ಎಚ್.ಎಸ್.ಸುಧೀಂದ್ರ (ಮೃದಂಗ), ಜಿ.ಓಂಕಾರರಾವ್ (ಘಟಂ) ಸಾಥ್ ನೀಡಲಿದ್ದಾರೆ~ ಎಂದರು.

`ಫೆಬ್ರುವರಿ 13 ರಂದು ಸಂಜೆ 6 ಕ್ಕೆ ಬಹುಭಾಷಾ ಕವಿ ಸಮ್ಮೇಳನ ನಡೆಯಲಿದೆ. ಕವಿ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಕವಿಗಳಾದ ಬಿ.ಆರ್.ಲಕ್ಷ್ಮಣರಾವ್, ಜರಗನಹಳ್ಳಿ ಶಿವಶಂಕರ್, ಬಿ.ಟಿ. ಲಲಿತಾನಾಯಕ್, ಚನ್ನಣ್ಣ ವಾಲಿಕಾರ್, ಸವಿತಾ ನಾಗಭೂಷಣ, ಮಾಲತಿ ಪಟ್ಟಣ ಶೆಟ್ಟಿ, ಆರಿಫ್ ರಾಜಾ, ಎಸ್. ಮಂಜುನಾಥ ಮತ್ತಿತರರು ಭಾಗವಹಿಸಲಿದ್ದಾರೆ~ ಎಂದು ವಿವರಿಸಿದರು.

`ಫೆಬ್ರುವರಿ 14 ರಂದು ಸಂಜೆ 6 ಕ್ಕೆ ಯುಗಳ ವಸಂತ ಕಾರ್ಯಕ್ರಮ ನಡೆಯಲಿದೆ. ಎಸ್.ಶಂಕರ್ ಮತ್ತು ವಿನಾಯಕ ತೊರವಿ ಅವರ ಗಾಯನ, ಎಚ್.ಎನ್ . ಭಾಸ್ಕರ್ (ವಯೊಲಿನ್), ಚೆಲುವರಾಜು (ಮೃದಂಗ), ಭರದ್ವಾಜ್ ಆರ್.ಸಾತವಲ್ಲಿ (ಮೋರ್ಚಿಂಗ್), ವಿಶ್ವನಾಥ್ ನಾಕೋಡ್ (ತಬಲಾ), ವ್ಯಾಸಮೂರ್ತಿ ಕಟ್ಟಿ (ಹಾಮೋನಿಯಂ) ಸಾಥ್ ನೀಡಲಿದ್ದಾರೆ. ಸಂಜೆ 7 ಕ್ಕೆ ಪ್ರವೀಣ್ ಗೋಡ್ಖಿಂಡಿ ಮತ್ತು ಎಂ.ಕೆ.ಪ್ರಾಣೇಶ್ ಅವರ ಬಾನ್ಸುರಿ ಮತ್ತು ಕೊಳಲು ವಾದನವಿದೆ~ ಎಂದು ವಿವರ ನೀಡಿದರು.

`ಹೀಗೆ 17 ರವರೆಗೆ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು. 18 ರಂದು ರಾಮನಗರದ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಸಂಜೆ 5.30 ಕ್ಕೆ ಜನಪದ ವೈಭವ ಕಾರ್ಯಕ್ರಮ ನಡೆಯಲಿದೆ. ಹಿರಿಯ ಜನಪದ ಕಲಾವಿದೆ ಬನ್ನೂರು ಕೆಂಪಮ್ಮ ಉದ್ಘಾಟಿಸಲಿದ್ದಾರೆ. ಕೋಲಾಟ, ಪೂಜಾಕುಣಿತ, ಕಂಸಾಳೆ, ಚಿಟ್‌ಮೇಳ, ಸುಗ್ಗಿ ಕುಣಿತ, ಕರಪಾಲ ಮೇಳ ಹೀಗೆ ವಿವಿಧ ರೀತಿಯ ಜನಪದ ಕಾರ್ಯಕ್ರಮಗಳು ನಡೆಯಲಿವೆ~ ಎಂದು ಮಾಹಿತಿ ನೀಡಿದರು.ಗೋಷ್ಠಿಯಲ್ಲಿ ಸಹಾಯಕ ನಿರ್ದೇಶಕಿ ಎಚ್.ಎಸ್.ಸರಸ್ವತಿ, ಕಾರ್ಯಕ್ರಮ ನಿರ್ವಾಹಕ ಉಮೇಶ ಅವರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT