ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸೀರುದ್ದೀನ್ ದಿ ಮ್ಯಾನ್

Last Updated 14 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್: ಶುಕ್ರವಾರ `ಆರ್ಮ್ಸ ಆ್ಯಂಡ್ ದಿ ಮ್ಯಾನ್~ ನಾಟಕ ಪ್ರದರ್ಶನ (ರಚನೆ: ಜಾರ್ಜ್ ಬರ್ನಾಡ್ ಷಾ. ನಿರ್ದೇಶನ ಮತ್ತು ಮುಖ್ಯಪಾತ್ರದಲ್ಲಿ: ನಾಸೀರುದ್ದೀನ್ ಶಾ. ಇತರ ಕಲಾವಿದರು: ರತ್ನಾ  ಪಾಠಕ್ ಶಾ, ರಣದೀಪ್ ಹೂಡಾ, ಫಜೇಹ್ ಜಲಾಲಿ, ಶಿವಾನಿ ಟಂಕಸಾಲೆ, ಅಮಿತ್ ಸಿಯಾಲ್ ಮತ್ತು ಸಾಹಿಲ್ ವೈದ್ಯ).

1885-86ರಲ್ಲಿ ಸರ್ಬಿಯಾ ಮತ್ತು ಬಲ್ಗೇರಿಯಾ ನಡುವೆ ನಡೆದ ಯುದ್ಧವನ್ನು ಆಧರಿಸಿ ಬರೆದ `ಆರ್ಮ್ಸ ಆ್ಯಂಡ್ ದಿ ಮ್ಯಾನ್~ ಬರ್ನಾಡ್ ಷಾ ಅವರ ಅತಿ ಜನಪ್ರಿಯ ವಿಡಂಬನಾತ್ಮಕ ನಾಟಕಗಳಲ್ಲಿ ಒಂದು.

ಇದನ್ನು ಇಂದಿಗೂ ಅತ್ಯುತ್ತಮ ನಾಟಕ ಎಂದು ಪರಿಗಣಿಸಲಾಗುತ್ತಿದೆ. ಯುದ್ಧವನ್ನು ದೊಡ್ಡದೊಂದು ಘಟನೆ ಎಂಬಂತೆ ಚಿತ್ರಿಸುವ, ಆದರ್ಶಮಯ ಪ್ರೀತಿಯನ್ನು ಗಮನದಲ್ಲಿಟ್ಟುಕೊಂಡು ಭಾವನೆ ವ್ಯಕ್ತಪಡಿಸುವ ರೀತಿಯನ್ನು ನಾಟಕ ಕಟುವಾಗಿ ಟೀಕಿಸುತ್ತದೆ.
 
1894ರಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡು ಜಗತ್ತಿನಾದ್ಯಂತ ಅಸಂಖ್ಯಾತ ರಂಗ ಪ್ರಯೋಗಗಳನ್ನು ಕಂಡಿದೆ. ಚಲನಚಿತ್ರವಾಗಿದೆ. ಬಿಬಿಸಿಯಲ್ಲಿ ಧಾರಾವಾಹಿಯಾಗಿ ಪ್ರಸಾರಗೊಂಡಿದೆ.

ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿ ಕಾವಲ್. ಸಂಜೆ 7.30. ಟಿಕೆಟ್‌ಗಳಿಗೆ: ಜೊಯ್ಸ (2341 4681),www.indianstage.in ಅಥವಾ www.bookmyshow.com  ಮಾಹಿತಿಗೆ: 3989 5050 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT