ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಹಾನ್ಸ್‌ನಲ್ಲಿ ವಿಚಾರಸಂಕಿರಣ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್‌ (ಇಂಡಿಯಾ) ಸಂಸ್ಥೆಯು ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಪ್ರದರ್ಶನವನ್ನು ನಿಮ್ಹಾನ್ಸ್ ಕ್ಯಾಂಪಸ್‌ನ ಸಮ್ಮೇಳನ ಸಭಾಂಗಣದಲ್ಲಿ  ಬುಧವಾರದಿಂದ (ಫೆ.22) ರಿಂದ 24 ರವರೆಗೆ ಏರ್ಪಡಿಸಿದೆ~ ಎಂದು ಸಂಸ್ಥೆಯ ಕಾರ್ಯದರ್ಶಿ ಚಂದ್ರಮೌಳಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ಹಿಂದೆ ಕಟ್ಟಿದ ಕಟ್ಟಡಗಳು ಇಂದಿಗೂ ಗಟ್ಟಿಮುಟ್ಟಾಗಿವೆ. ಆದರೆ, ಇಂದಿನ ಕಟ್ಟಡಗಳಲ್ಲಿ ಬಹುಬೇಗ ಬಿರುಕು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣವೇನು ಎಂದು ಕಂಡುಹಿಡಿಯುವ ಪ್ರಯತ್ನ ಈ ವಿಚಾರ ಸಂಕಿರಣದಲ್ಲಿ ಮಾಡಲಾಗುವುದು~ ಎಂದರು. `ಕಟ್ಟಡಗಳ ರಚನೆಗಳ ನವೀಕರಣದಲ್ಲಿ ಎದುರಾಗುವ ಸಮಸ್ಯೆಗಳು, ಮರುಸ್ಥಾಪನೆ ತಂತ್ರಗಳು, ರಚನಾತ್ಮಕ ಆರೋಗ್ಯ ಮೇಲ್ವಿಚಾರಣಾ ವ್ಯವಸ್ಥೆ, ಪರ್ಯಾಯ ವಸ್ತುಗಳು, ನಿರ್ಮಾಣ ರಾಸಾಯನಿಕಗಳು, ಡಯಾಗ್ನೊಸ್ಟಿಕ್ ಸಾಧನಗಳು, ಟೆಕ್ನೊ-ಕಾನೂನು ಸಮಸ್ಯೆಗಳು ಮತ್ತು ವಿಶ್ಲೇಷಣೆಗಳ ಬಳಕೆಯಲ್ಲಿ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗುವುದು~ ಎಂದು ವಿವರಣೆ ನೀಡಿದರು.

`ದುರಸ್ತಿ, ಪುನರ್ವಸತಿ, ರಚನೆಗಳ ವಿಸ್ತರಣೆ ಬಗ್ಗೆ ಮತ್ತು ಆರ್ಥಿಕ ಆದಾಯ ಹೆಚ್ಚಿಸುವ ಯೋಜನೆಗಳನ್ನು ಒದಗಿಸುವಲ್ಲಿ ಈ ವಿಚಾರ ಸಂಕಿರಣ ಸಹಾಯಕವಾಗಲಿದೆ~ ಎಂದರು. ಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಪಿ.ಎನ್.ರಘುನಾಥ್, ಸಂಸ್ಥೆಯ ಅಶ್ವತ್ಥ್, ಅಣ್ಣೇಗೌಡ್ರು ಮತ್ತಿತರರು ಉಪಸ್ಥಿತರಿದ್ದರು.

`ವಿಚಾರ ಗೋಷ್ಠಿಯಲ್ಲಿ ಡಾ.ಎ.ಕೆ.ಚಟರ್ಜಿ, ಡಾ.ಪಿ.ವೈ.ಮಂಜುರೆ, ಡಾ.ಎ.ಕೆ.ಸಿನ್ಹಾ, ಡಾ.ಎನ್.ರಾಜಗೋಪಾಲನ್, ಡಾ.ಜಿ.ನಾರಾಯಣನ್, ಪ್ರೊ.ಎಸ್ಕೆ.ಗಾಂಧಿ, ಪ್ರೊ.ಎಲ್.ಆರ್.ಕಡಿಯಾಲಿ ಮುಂತಾದವರು ಮಾತನಾಡಲಿದ್ದಾರೆ. ಪ್ರದರ್ಶನವು ಉಚಿತವಾಗಿದ್ದು ಸಾರ್ವಜನಿಕರು ಭಾಗವಹಿಸಬಹುದು~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT