ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ

Last Updated 14 ಫೆಬ್ರುವರಿ 2012, 9:50 IST
ಅಕ್ಷರ ಗಾತ್ರ

ಬೆಳಗಾವಿ: ನಿರಂತರ ಪರಿಶ್ರಮ ಹಾಗೂ ಆಳವಾದ ಅಧ್ಯಯನದಿಂದ ಮಾತ್ರ ಸಾಧನೆ ಸಾಧ್ಯ ಎಂದು ರಾಜಾ ಲಖಮನಗೌಡ ವಿಜ್ಞಾನ ಕಾಲೇಜಿನ ಉಪನ್ಯಾಸಕ ಪ್ರೊ.ಯು.ಆರ್. ರಜಪೂತ ಅಭಿಪ್ರಾಯಪಟ್ಟರು.

ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಡಾ.ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಿಂದ ನಗರದ ಜಿ.ಜಿ.ಯಳ್ಳೂರ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

`ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ಸಮಗ್ರ ವ್ಯಕ್ತಿತ್ವ ವಿಕಸನ ಹೊಂದಬಹುದು. ಸಾಧನೆಗೂ ಇದು ಸಹಾಯಕವಾಗುತ್ತದೆ~ ಎಂದು ಅವರು ಸಲಹೆ ಮಾಡಿದರು.
ಶಾಲೆಯ ಮುಖ್ಯ ಅಧ್ಯಾಪಕ ಎಸ್. ಎಸ್.ಪಾಟೀಲ ಉಪಸ್ಥಿತರಿದ್ದರು.

ಬೈಲಹೊಂಗಲ ತಾಲ್ಲೂಕಿನ ಹೂಲಿಕಟ್ಟಿ ಗ್ರಾಮದ ಕೆ.ಪಿ. ಮೊಕಾಶಿ ಸರ್ಕಾರಿ ಪ್ರೌಢಶಾಲೆಯ, ದಯಾನಂದ ಬಡಕಪ್ಪನವರ ಹಾಗೂ ನೀಲಕಂಠ ತಳವಾರ (ಪ್ರಥಮ), ಬೈಲಹೊಂಗಲ ತಾಲ್ಲೂಕಿನ ಕಿತ್ತೂರಿನ ಕಿತ್ತೂರು ರಾಣಿ ಚನ್ನಮ್ಮ ವಿದ್ಯಾರ್ಥಿನಿಯ ವಸತಿ ಶಾಲೆಯ  ರೋಶಿನಿ ಚೆನಾಳ ಹಾಗೂ ಅನುಶ್ರೀ ಮುಡಗೌಡರ(ದ್ವಿತೀಯ), ಬೆಳಗಾವಿಯ ಎಸ್.ಎಸ್.ಸಂಯುಕ್ತ ಜೂನಿಯರ್ ಕಾಲೇಜಿನ ಅನಿಲ ಚವ್ಹಾನ ಹಾಗೂ ಕಾರ್ತಿಕ್ ಮಿಣಚೆ (ತೃತೀಯ) ಬಹುಮಾನ ಗಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT