ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯಾಭಿವಂದನೆ

Last Updated 25 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಶಿವಪ್ರಿಯ ನೃತ್ಯಶಾಲೆ: ಭಾನುವಾರ ಸ್ನೇಹಾ ಭಾಗ್ವತ್ ಮತ್ತು ದಿಶಾ ಮದನ್ ಅವರಿಂದ ಯುಗಳ ನೃತ್ಯ. ಅತಿಥಿಗಳು: ಕಿರಣ್ ಸುಬ್ರಹ್ಮಣ್ಯ, ಸಂಧ್ಯಾ ಕಿರಣ್, ಮೇದಿನಿ ಉದಯ್ ಭಾವನೆಗಳ ಅಭಿವ್ಯಕ್ತಿಗೆ ನೃತ್ಯ ಸುಂದರ ಮಾಧ್ಯಮ. ಸಮಾನ ಮನಸ್ಕರಾದ ಸ್ನೇಹಾ ಭಾಗ್ವತ್ ಮತ್ತು ದಿಶಾ ಮದನ್ ಈಗ ಒಂದೇ ವೇದಿಕೆಯಲ್ಲಿ ಯುಗಳ ನೃತ್ಯ ಪ್ರದರ್ಶಿಸಲು ಹೊರಟಿದ್ದಾರೆ. ಈ ಇಬ್ಬರೂ ಡಾ. ಸಂಜಯ್ ಶಾಂತಾರಾಮ್ ನೇತೃತ್ವದ ಶಿವಪ್ರಿಯಾ ನೃತ್ಯಶಾಲೆಯ ವಿದ್ಯಾರ್ಥಿಗಳು.

ವೃತ್ತಿಯಿಂದ ವಕೀಲೆಯಾಗಿರುವ ಸ್ನೇಹಾ ಭಾಗ್ವತ್, ಭವಾನಿ ರಾಮನಾಥ್ ಬಳಿ 7 ವರ್ಷದವಳಿದ್ದಾಗಲೇ ನೃತ್ಯಾಭ್ಯಾಸ ಆರಂಭಿಸಿದರು.ರಾಷ್ಟ್ರೀಯ ಸಂಗೀತ, ನೃತ್ಯ ಉತ್ಸವ, ಹಂಪಿ ಉತ್ಸವ ಸೇರಿದಂತೆ ಹಲವು ರಾಷ್ಟ್ರ, ರಾಜ್ಯ ಮಟ್ಟದ ವೇದಿಕೆಗಳಲ್ಲಿ ಮಿಂಚಿದ್ದಾರೆ. ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿನಿ ದಿಶಾ ಮದನ್, ಕಳೆದ 14 ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.
 
ರಂಗೋಲಿ ಆರ್ಟ್ಸ್ ಫೌಂಡೇಷನ್‌ನ  ‘ರಾಮಾಯಣ’ ನೃತ್ಯ ರೂಪಕದಲ್ಲಿ ಗುರು ಮಾಲತಿ ಅಯ್ಯಂಗಾರ್ ಜತೆ ಅಭಿನಯಿಸಿದ್ದಾರೆ. ದಸರಾ ಉತ್ಸವ, ತುಂಗಾ ಉತ್ಸವ ಸೇರಿದಂತೆ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಸ್ಥಳ: ಯವನಿಕ, ನೃಪತುಂಗ ರಸ್ತೆ. ಸಂಜೆ 6
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT