ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಟ್ ರೈಡರ್ಸ್‌ಗೆ ಮತ್ತೆ ಆಘಾತ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೇಪ್‌ಟೌನ್: ಅಜರ್ ಮಹಮ್ಮೂದ್ ಅವರ ಆಲ್‌ರೌಂಡ್ ಆಟದ ನೆರವಿನಿಂದ ಆಕ್ಲೆಂಡ್ ತಂಡದವರು ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಏಳು ವಿಕೆಟ್‌ಗಳ ಗೆಲುವು ಸಾಧಿಸಿದ್ದಾರೆ.

ನೈಟ್ ರೈಡರ್ಸ್ ತಂಡಕ್ಕೆ ಈ ಟೂರ್ನಿಯಲ್ಲಿ ಇದು ಸತತ ಎರಡನೇ ಸೋಲು. ಸೋಮವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ನೈಟ್ ರೈಡರ್ಸ್ ನೀಡಿದ 138 ರನ್‌ಗಳ ಗುರಿಯನ್ನು ಆಕ್ಲೆಂಡ್ 17.4 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು ತಲುಪಿತು.

ತಂಡದ ಗೆಲುವಿನಲ್ಲಿ ಅಜರ್ ಪ್ರಮುಖ ಪಾತ್ರ ನಿಭಾಯಿಸಿದರು. ಮೊದಲು ಬೌಲಿಂಗ್‌ನಲ್ಲಿ ಮೂರು ವಿಕೆಟ್ ಪಡೆದಿದ್ದ ಅವರು ಬ್ಯಾಟಿಂಗ್‌ನಲ್ಲಿ ಅಜೇಯ ಅರ್ಧ ಶತಕ ಗಳಿಸಿದರು. 42 ಎಸೆತ ಎದುರಿಸಿದ ಮಹಮ್ಮೂದ್ 3 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ಲುವ್ ವಿನ್ಸೆಂಟ್ ಕೇವಲ 12 ಎಸೆತಗಳಲ್ಲಿ 30 ರನ್ ಗಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ನೈಟ್ ರೈಡರ್ಸ್‌ಗೆ ಮನ್ವಿಂದರ್ ಬಿಸ್ಲಾ(38; 24 ಎಸೆತ) ಹಾಗೂ ಬ್ರೆಂಡನ್ ಮೆಕ್ಲಮ್ (40; 35 ಎ.) ಅವರು ನೆರವಾದರು. ಆದರೆ ರನ್‌ರೇಟ್ ಕಡಿಮೆಯಾಯಿತು.

ಸಂಕ್ಷಿಪ್ತ ಸ್ಕೋರ್: ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 (ಮನ್ವಿಂದರ್ ಬಿಸ್ಲಾ 38, ಬ್ರೆಂಡನ್ ಮೆಕ್ಲಮ್ 40, ಶಕೀಬ್ ಅಲ್ ಹಸನ್ 15, ಯೂಸುಫ್ ಪಠಾಣ್ ಔಟಾಗದೆ 22; ಅಜರ್ ಮಹಮ್ಮೂದ್ 16ಕ್ಕೆ3)

ಆಕ್ಲೆಂಡ್: 17.4 ಓವರ್‌ಗಳಲ್ಲಿ  3 ವಿಕೆಟ್ ನಷ್ಟಕ್ಕೆ 139 (ಮಾರ್ಟಿನ್ ಗುಪ್ಟಿಲ್ 25, ಲುವ್ ವಿನ್ಸೆಂಟ್ 30, ಅಜರ್ ಮಹಮ್ಮೂದ್ ಔಟಾಗದೆ 51, ಅನಾರು ಕಿಚನ್ 24; ಸುನಿಲ್ ನಾರಾಯಣ್ 24ಕ್ಕೆ2).
ಪಂದ್ಯ ಶ್ರೇಷ್ಠ: ಅಜರ್ ಮಹಮ್ಮೂದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT