ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ರಬ್ಬರ್‌ ರಫ್ತು ಶೇ 57 ಕುಸಿತ

Last Updated 8 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಡಿಸೆಂಬರ್‌ ತಿಂಗಳಿನಲ್ಲಿ ದೇಶದಲ್ಲಿನ ರಬ್ಬರ್‌ ತೋಟಗಳಲ್ಲಿನ ಉತ್ಪಾದನೆ ಕಡಿಮೆಯಾಗಿದ್ದರಿಂದ ದೇಶದ ನೈಸರ್ಗಿಕ ರಬ್ಬರ್‌ ರಫ್ತು ಪ್ರಮಾಣ ಶೇ 57ರಷ್ಟು (695 ಟನ್‌ನಷ್ಟು)  ಕುಸಿತ ಕಂಡಿದೆ.

ರಬ್ಬರ್‌ ಮಂಡಳಿಯು ತಿಳಿಸಿರುವ ಪ್ರಕಾರ, ‘ಕಳೆದ ವರ್ಷ ಇದೇ ಅವಧಿಯಲ್ಲಿ ರಬ್ಬರ್‌ ರಫ್ತು ಪ್ರಮಾಣ 1,603 ಟನ್‌ ಇತ್ತು’.
ಕಳೆದ ವರ್ಷಕ್ಕಿಂತ ಈ ಬಾರಿ ನೈಸರ್ಗಿಕ ರಬ್ಬರ್ ಉತ್ಪಾದನೆ ಶೇ 5ರಷ್ಟು, ಅಂದರೆ 1.08 ಲಕ್ಷ ಟನ್‌ಗಳಿಗೆ ಕುಸಿದಿದೆ. 2012ರಲ್ಲಿ ಈ ಪ್ರಮಾಣ 1.14 ಲಕ್ಷ ಟನ್‌ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT