ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯ ಆದೇಶ: ಅಕ್ರಮ ಶೆಡ್ ತೆರವು

Last Updated 9 ಜನವರಿ 2011, 11:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಇಲ್ಲಿನ ವಿಜಯಪುರ ಬಡಾವಣೆ ವ್ಯಾಪ್ತಿಯಲ್ಲಿರುವ ಒಕ್ಕಲಿಗರ ಭವನದ ಎದುರಿನಲ್ಲಿದ್ದ ನಗರಸಭೆಗೆ ಸೇರಿದ್ದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಶೆಡ್‌ಗಳನ್ನು ನ್ಯಾಯಾಲಯದ ತೀರ್ಪಿನ ಅನ್ವಯ ನಗರಸಭೆಯ ಅಧಿಕಾರಿಗಳು ಶನಿವಾರ ಮುಂಜಾನೆ ತೆರವುಗೊಳಿಸಿದರು.

ಒಕ್ಕಲಿಗರ ಸಮುದಾಯ ಭವನದ ಎದುರಿದ್ದ ಈ ಜಾಗದ ಒಡೆತನಕ್ಕೆ ಸಂಬಂಧಿಸಿದಂತೆ ನಗರದ ಮುಸ್ಲಿಂ ಸಂಘಟನೆಯೊಂದು ನ್ಯಾಯಾಲಯದ ಮೊರೆಹೋಗಿದ್ದರಿಂದ ನಗರಸಭೆಗೆ ಸೇರಿದ್ದು ಎನ್ನಲಾದ ಜಾಗದ ವ್ಯಾಜ್ಯ ಕಳೆದ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿತ್ತು. ಇತ್ತೀಚೆಗೆ ಈ ಜಾಗದ ಒಡೆತನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಗರಸಭೆ ಪರವಾಗಿ ತೀರ್ಪು ನೀಡಿದ್ದು, ಈ ಹಿನ್ನೆಲೆಯಲ್ಲಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ದೋೀಬಿ ಅಂಗಡಿ, ಸೌದೆ ಮಂಡಿ ಹಾಗೂ ಕುಟುಂಬವೊಂದು ನಿರ್ಮಿಸಿಕೊಂಡು ವಾಸಿಸುತ್ತಿದ್ದ ಶೆಡ್‌ಅನ್ನು ನಗರಸಭೆ ತೆರವುಗೊಳಿಸಲು ಮುಂದಾಗಿತ್ತು.

ಪೌರಾಯುಕ್ತ ಕೃಷ್ಣಮೂರ್ತಿ, ಸಹಾಯಕ ಅಭಿಯಂತರ ತೇಜಮೂರ್ತಿ  ನೇತೃತ್ವದ ತಂಡ ಸುಮಾರು 50ಕ್ಕೂ ಹೆಚ್ಚು ನಗರಸಭೆ ಸಿಬ್ಬಂದಿ ಹಾಗೂ ಬಿಗಿ ಪೊಲೀಸ್ ಪಹರೆಯೊಂದಿಗೆ ಸ್ಥಳಕ್ಕೆ ತೆರಳಿ ಜೆಸಿಬಿ ಯಂತ್ರಗಳ ಸಹಾಯದಿಂದ ಕಾರ್ಯಾಚರಣೆಗಿಳಿದು ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಶೆಡ್‌ಗಳನ್ನು ನೆಲಸಮಗೊಳಿಸಿದರು. ನಗರ ವೃತ್ತ ನಿರೀಕ್ಷಕ ಸಿದ್ದಯ್ಯ, ನಗರ ಠಾಣೆಯ ಸಿಪಿಐ ಸತೀಶ್ ಹಾಗೂ 20 ಪೊಲೀಸರು ಕಾರ್ಯಾಚರಣೆಗೆ ರಕ್ಷಣೆ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT