ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ನಲ್ಲಿ ಭೂಕಂಪ: ಕಿವೀಸ್ ಆಟಗಾರರ ಆತಂಕ

Last Updated 22 ಫೆಬ್ರುವರಿ 2011, 18:05 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಭೂಕಂಪ ಸಂಭವಿಸಿದ ಸುದ್ದಿಯನ್ನು ಕೇಳಿ ಕಿವೀಸ್ ತಂಡದ ಆಟಗಾರರು ಆತಂಕಗೊಂಡಿದ್ದಾರೆ.

ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿರುವ ನ್ಯೂಜಿಲೆಂಡ್ ತಂಡದವರು ತಮ್ಮ ನಾಡಿನಲ್ಲಿ ಭೂಕಂಪದಿಂದ ಜನರು ಸಂಕಷ್ಟದಲ್ಲಿ ಸಿಲುಕಿದ್ದರ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.

‘ಮಂಗಳವಾರ ಸಂಭವಿಸಿದ ಭೂಕಂಪವು ಕ್ರೈಸ್ಟ್‌ಚರ್ಚ್ ಜನರಿಗೆ ಭಯಾನಕ ಘಟನೆ’ ಎಂದು ನ್ಯೂಜಿಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗುಪ್ಟಿಲ್ ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

‘ಭಾರತದಲ್ಲಿ ಇರುವ ನಾವು ಬೆಳಿಗ್ಗೆ ಎದ್ದಾಗ ಆಘಾತಕಾರಿ ಸುದ್ದಿಯನ್ನು ಕೇಳಿದೆವು. ನಮ್ಮ ನಾಡಿನಲ್ಲಿ ಮತ್ತೊಮ್ಮೆ ಭಾರಿ ಭೂಕಂಪ ಸಂಭವಿಸಿದೆ ಎಂದ ತಿಳಿದು ಬೆಚ್ಚಿಬಿದ್ದೆವು’ ಎಂದು ನ್ಯೂಜಿಲೆಂಡ್ ತಂಡದ ಆಡಳಿತವು ತಿಳಿಸಿದೆ. ತಂಡದಲ್ಲಿರುವ ಕೆಲವು ಆಟಗಾರರ ಕುಟುಂಬದವರು ಕ್ರೈಸ್ಟ್‌ಚರ್ಚ್ ನಿವಾಸಿಗಳಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT