ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಗಳ ಮೇಲೆ ಸಿಟ್ಟು: ಅನಕ್ಷರಸ್ಥ ಕಣಕ್ಕೆ

Last Updated 5 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಪಣಜಿ (ಐಎಎನ್‌ಎಸ್‌): ವಾಸ್ಕೊದಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಬಯಲಿಗೆ ಎಳೆಯದಿರುವುದು, ನಿರಂತರವಾಗಿ ನಡೆಯು­ತ್ತಿರುವ ಪೊಲೀಸ್‌ ಕಿರುಕುಳ ಪ್ರಕರಣಗಳು ಮತ್ತು ಹಣದುಬ್ಬರದಿಂದ ಬೇಸತ್ತು ಗೋವಾದಲ್ಲಿ ಅನಕ್ಷರಸ್ಥರೊಬ್ಬರು ಲೋಕಸಭೆ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ.

ಗೋವಾದ ಎರಡು ಲೋಕಸಭೆ ಕ್ಷೇತ್ರಗಳಲ್ಲಿ ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 42 ವರ್ಷದ ಬಾಲಕೃಷ್ಣ ಸಲಗಾಂವಕರ್‌ ಒಬ್ಬರೇ ಅಕ್ಷರಾಭ್ಯಾಸ ಇಲ್ಲ­ದ­ವರು.  ರಾಜ್ಯ­ದಲ್ಲಿ ಸಾಕ್ಷ­ರತೆ ಪ್ರಮಾಣ ಶೇ 87­ರಷ್ಟಿದೆ. ‘ವಾಸ್ಕೊ ಅತ್ಯಾಚಾರ ಪ್ರಕರಣ ನನಗೆ ಭಾರಿ ಘಾಸಿ ಉಂಟು ಮಾಡಿತ್ತು. ನನ್ನ ಸಹೋದರನ ಮಗು ಕೂಡ ಅದೇ ಶಾಲೆಯಲ್ಲಿ ಓದುತ್ತಿದೆ. ಅದರಿಂದ ನಾವು ಭಯಭೀತ­ರಾಗಿದ್ದೇವೆ. ಈ ಪ್ರಕರಣದ ಸೂಕ್ತ ತನಿಖೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ನಮ್ಮ ಸಹಾಯಕ್ಕೆ ಬಂದಿಲ್ಲ’ ಎಂದು ಸಲಗಾಂವಕರ್‌ ಗೋಳು ತೋಡಿಕೊಂಡಿದ್ದಾರೆ.

‘ದೆಹಲಿಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ನಡೆದಾಗ ಕಾಂಗ್ರೆಸ್‌ ಪ್ರತಿಭಟನೆ ನಡೆಸಿತ್ತು. ಆದರೆ, ಗೋವಾದಲ್ಲಿ ಅವರು ವಿರೋಧ ಪಕ್ಷವಾಗಿ ನಿಷ್ಪ್ರಯೋಜಕ­ರಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT