ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆ ಉಳಿಯಲು ಇತಿಹಾಸದ ಅರಿವು ಅಗತ್ಯ

Last Updated 13 ಸೆಪ್ಟೆಂಬರ್ 2011, 8:25 IST
ಅಕ್ಷರ ಗಾತ್ರ

ಬೀದರ್: ಐತಿಹಾಸಿಕ ಪರಂಪರೆಯನ್ನು ಉಳಿಸಿ ಬೆಳೆಸುವುದಕ್ಕಾಗಿ ಪ್ರತಿಯೊಬ್ಬರಿಗೆ ಇತಿಹಾಸದ ಅರಿವು ಅಗತ್ಯ ಎಂದು ಪ್ರೊ. ರಮೇಶ ಪಾಟೀಲ್ ಚಟ್ನಳ್ಳಿ ಅಭಿಪ್ರಾಯಪಟ್ಟರು.

ನಗರದ ಸಿದ್ಧಾರೂಢ ಮಹಿಳಾ ಪದವಿ ಕಲಾ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ `ಐತಿಹಾಸಿಕ ಪರಂಪರೆ ಉಳಿಸಿ~ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತಿಹಾಸ ಅಧ್ಯಯನ ಮಾಡುವುರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ. ಭವಿಷ್ಯ ಕುರಿತು ಹೇಳುತ್ತದೆ. ಅಲ್ಲದೇ ಉತ್ತಮ ಪೌರನನ್ನಾಗಿ ರೂಪಿಸುತ್ತದೆ. ಆದ್ದರಿಂದ ಇತಿಹಾಸದ  ಅರಿವು ಅವಶ್ಯಕ ಎಂದು ಹೇಳಿದರು.
ಬದುಕಿನ ಮೌಲ್ಯಗಳನ್ನು ತಿಳಿಸಿಕೊಡಲು ಇತಿಹಾಸ ಸಹಕಾರಿಯಾಗಿದೆ ಎಂದು ತಿಳಿಸಿದರು.

ಐತಿಹಾಸಿಕ ಸ್ಥಳಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಇತಿಹಾಸದ ಅರಿವು ಮೂಡಿಸಬೇಕಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಸೂರ್ಯಕಾಂತ ಐನಾಪುರ ನುಡಿದರು.

ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಡಾ. ಜಗನ್ನಾಥ ಹೆಬ್ಬಾಳೆ ಉದ್ಘಾಟಿಸಿ ಮಾತನಾಡಿದರು. ಪ್ರೊ. ಎಸ್.ಬಿ. ಬಿರಾದಾರ, ವೀರಶೆಟ್ಟಿ ಗಂಗಶೆಟ್ಟಿ, ಅಮರನಾಥ ಕಣಜಿ ಉಪಸ್ಥಿತರಿದ್ದರು. ಪ್ರೊ. ಬಸವರಾಜ ಹೆಗ್ಗೆ ಸ್ವಾಗತಿಸಿದರು. ಡಾ. ಚಂದ್ರಪ್ಪ ಭತಮುರ್ಗೆ ನಿರೂಪಿಸಿದರು. ಪ್ರೊ. ಈರಣ್ಣ ಕಾಳಮದ್ರಿಗಿ ವಂದಿಸಿದರು. ಕರ್ನಾಟಕ ಸಾಹಿತ್ಯ ಪರಿಷತ್ ಹಾಗೂ ಸಿದ್ಧಾರೂಢ ಮಹಿಳಾ ಪದವಿ ಕಲಾ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT