ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿವರ್ತನಾ ಸೀಟು ರದ್ದಾಗಲಿ

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವೈದ್ಯಕೀಯ ಮಹಾವಿದ್ಯಾಲಯಗಳ ಸ್ನಾತಕೋತ್ತರ ಪದವಿಯ ಪ್ರವೇಶಾತಿಯಲ್ಲಿ  ಭಾರಿ ಅಕ್ರಮ - ಅವ್ಯವಹಾರ ನಡೆದಿದ್ದು, ಆರೋಪಿಗಳನ್ನು ಬಂಧಿಸಿದ (ಪ್ರವಾ ಅ.4) ವರದಿಯಾಗಿದೆ. ಸಮಾಜದ ಪ್ರತಿಷ್ಠಿತ, ಪ್ರಭಾವಿಗಳೇ ಇದರ ಹಿಂದೆ ಇರುತ್ತಾರೆ!

ಪ್ರತಿ ಶೈಕ್ಷಣಿಕ ವರ್ಷದಲ್ಲಿ ಓರ್ವ ಅಭ್ಯರ್ಥಿಗೆ ಸರ್ಕಾರಿ ಕೋಟಾದ ಒಂದು ಸೀಟನ್ನು  ವಿತರಿಸಿದ ಮೇಲೆ ಆ ಅಭ್ಯರ್ಥಿ ಪ್ರವೇಶ ಪಡೆಯದಿದ್ದರೆ ಅದು ಪುನಃ ಸರ್ಕಾರಕ್ಕೆ ಬಂದು, ಆ ಅಭ್ಯರ್ಥಿಯ ಹಿಂದಿನ ಕ್ರಮಾಂಕದ ರ‌್ಯಾಂಕ್‌ನವರಿಗೆ ಸೇರಬೇಕು, ಇದು ಸಹಜ ನ್ಯಾಯ.
 
ಸರ್ಕಾರಿ ಕೋಟಾದ ಅಭ್ಯರ್ಥಿಯು ಕೊನೆಯ ದಿನಾಂಕದೊಳಗೆ ಪ್ರವೇಶ ಪಡೆಯದಿದ್ದರೆ, ಆ  ಸೀಟು ಆಡಳಿತ ಮಂಡಳಿಯ ಸೀಟಾಗಿ ಪರಿವರ್ತಿತವಾಗುವ ಪದ್ಧತಿಯೇ ವಿಚಿತ್ರ. ತಿಳಿದು, ತಿಳಿದೂ ಇದಕ್ಕೆ ಅವಕಾಶ ಮಾಡಿಕೊಟ್ಟಿರುವ ಸಂಬಂಧಿತ ಇಲಾಖೆಗಳ ಕಾರ್ಯಪ್ರವೃತ್ತಿ ಪ್ರಶ್ನಾರ್ಹ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT