ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಕಾಳಜಿಯಲ್ಲಿ ಭಾರತ ಹಿಂದೆ

Last Updated 7 ಫೆಬ್ರುವರಿ 2012, 8:50 IST
ಅಕ್ಷರ ಗಾತ್ರ

ಬಸವಕಲ್ಯಾಣ: ಅನ್ಯ ದೇಶದಲ್ಲಿರುವ ನಾಗರಿಕರಂತಹ ಪರಿಸರ ಕಾಳಜಿ ನಮ್ಮ ಜನರಲ್ಲಿ ಇಲ್ಲ. ಪರಿಸರ ಸಂರಕ್ಷಿಸಿದರೆ ನಮ್ಮನ್ನು ನಾವು ಸಂರಕ್ಷಿಸಿಕೊಂಡಂತೆ ಎಂಬ ಭಾವನೆ ಯಾರಲ್ಲೂ ಇಲ್ಲ ಎಂದು ಎಸ್.ಎಸ್.ಕೆ.ಬಿ ಕಾಲೇಜಿನ ಪ್ರಾಚಾರ್ಯ ಎ.ಡಿ.ಪಾಟೀಲ ಅಭಿಪ್ರಾಯಪಟ್ಟರು.

ಇಲ್ಲಿನ ಎಸ್.ಎಸ್.ಕೆ.ಬಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡ ರಾಷ್ಟ್ರೀಯ ಹಸಿರು ಪಡೆಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಮರ ಗಿಡಗಳ ಬಗ್ಗೆ ಕಾಳಜಿ ಇರಬೇಕು. ಮನೆ ಹಾಗೂ ಶಾಲಾ ಕಾಲೇಜುಗಳಲ್ಲಿ ಹಸಿರು ಕಂಗೊಳಿಸುವಂತೆ ನಾವೆಲ್ಲರೂ ಪ್ರಯತ್ನಿಸಬೇಕು ಎಂದರು.

ಪ್ರೊ.ಘಟ್ಪಣದಿ ಮಾತನಾಡಿ ಮಾನವನ ಅವಶ್ಯಕತೆ ಪೋರೈಸುವ ಶಕ್ತಿ ಪರಿಸರಕ್ಕೆ ಇದೆ. ಆದರೆ ದುರಾಸೆಯನ್ನಲ್ಲ ಎಂದರು. ಡಾ.ಬಂಡೆಪ್ಪ ಕಾಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಶಿವಕುಮಾರ ಪಾಟೀಲ, ಡಾ.ಜಿ.ಎಸ್.ಭುರಳೆ ಉಪಸ್ಥಿತರಿದ್ದರು. ಶರಣಬಸವ ನಿರೂಪಿಸಿದರು. ಬಸವರಾಜ ಬೀಳಗಿ ವಂದಿಸಿದರು.

ಕ್ಲಬ್: ಇಲ್ಲಿನ ಎಸ್.ಎಸ್.ಕೆ.ಬಿ ಕಾಲೇಜಿನಲ್ಲಿ ಸೋಮವಾರ ರೆಡ್‌ರಿಬ್ಬನ್ ಕ್ಲಬ್ ಉದ್ಘಾಟಿಸಲಾಯಿತು. ಡಾ.ಜಿ.ಎಸ್.ಭುರಳೆ ಉದ್ಘಾಟನೆ ನೆರವೆರಿಸಿದರು. ಪ್ರಾಚಾರ್ಯ ಎ.ಡಿ. ಪಾಟೀಲ, ಶಾಂತಕುಮಾರ ಬಾಲನಗೋಳ ಮುಂತಾದವರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT