ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸಂರಕ್ಷಣೆಗೂ ಬದ್ಧತೆ ಅಗತ್ಯ

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಕೃಷಿ ಸಹಕಾರ ಸಂಘಗಳನ್ನು ರಚಿಸುವ ವಿಚಾರದಲ್ಲಿ ರೈತರು ಒಗ್ಗಟ್ಟು ಪ್ರದರ್ಶಿಸುವ ಮಾದರಿಯಲ್ಲೇ ಪರಿಸರ ಸಂರಕ್ಷಣೆಯ ವಿಚಾರದ್ಲ್ಲಲಿಯೂ ಬದ್ಧತೆಯನ್ನು ತೋರ್ಪಡಿಸಬೇಕು~ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಆರ್. ದ್ವಾರಕೀನಾಥ್ ಸಲಹೆ ನೀಡಿದರು.

ಕೃಷಿ ಇಲಾಖೆಯು ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ವಿಶ್ವ ಆಹಾರ ದಿನಾಚರಣೆಯ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಕೃಷಿ ಚಟುವಟಿಕೆಯ ಬೆಳವಣಿಗೆಗೆ ನೆರವು ನೀಡುತ್ತಿರುವ ಸಹಕಾರಿ ಸಂಸ್ಥೆಗಳು ಆಹಾರ ಭದ್ರತೆಗೂ ಮಹತ್ವ ನೀಡಬೇಕು. ಆರ್ಥಿಕ ವ್ಯವಸ್ಥೆಯಲ್ಲಿ ರೈತರನ್ನು ಪ್ರೋತ್ಸಾಹಿಸುವಂತಹ ಸಾಲಸೌಲಭ್ಯಗಳು ದೊರೆಯಬೇಕಿದೆ~ ಎಂದು ಹೇಳಿದರು.

`ಮಳೆ ಮತ್ತು ಮಣ್ಣಿನ ಗುಣಗಳನ್ನು ಆಧರಿಸಿ ಬೆಳೆ ತೆಗೆಯುವ ಕೌಶಲವನ್ನು ರೈತರು ರೂಢಿಸಿಕೊಂಡರೆ ಮಾತ್ರ ಕೃಷಿ ಕ್ಷೇತ್ರದಲ್ಲಿನ ಬಹುಪಾಲು ಸವಾಲುಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕೃಷಿಗೆ ಸಂಬಂಧಪಟ್ಟ ಸಹಕಾರ ಸಂಸ್ಥೆಗಳು ಕೃಷಿ ಬೆಳವಣಿಗೆಯೊಂದಿಗೆ ಪರಿಸರವನ್ನು ಉಳಿಸುವತ್ತ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ~ ಎಂದು ತಿಳಿಸಿದರು.

`ಸರ್ಕಾರ ನಿಗದಿಪಡಿಸಿರುವ ಕೃಷಿಕನಿಗೆ ಕನಿಷ್ಠ ಕೂಲಿ ಎಲ್ಲೆಡೆ ಸಮರ್ಪಕವಾಗಿ ಜಾರಿಯಾಗಿರುವ ಬಗ್ಗೆ ಅನುಮಾನವಿದೆ. ಆದರೆ, ಕೃಷಿಕ ಸ್ನೇಹಿ ವಾತಾವರಣ, ವೈಜ್ಞಾನಿಕ ಕೃಷಿ ಮತ್ತು ಸಂಶೋಧನೆಗೆ ಮಹತ್ವ ನೀಡಿದರೆ ಭವಿಷ್ಯದಲ್ಲಿ ಆಹಾರ ಭದ್ರತೆಯ ಭರವಸೆ ನೀಡಲು ಸಾಧ್ಯವಾಗುತ್ತದೆ~ ಎಂದು ಹೇಳಿದರು.
ಕೃಷಿ ಸಹಕಾರಿ ಪತ್ತಿನ ಸಂಘದ ಹೆಚ್ಚುವರಿ ಕಾರ್ಯದರ್ಶಿ ಬಿ.ಎ. ಮಹಾದೇವಪ್ಪ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT