ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ತಂಡಕ್ಕೆ ನಿರೀಕ್ಷಿತ ಗೆಲುವು

Last Updated 23 ಫೆಬ್ರುವರಿ 2011, 18:20 IST
ಅಕ್ಷರ ಗಾತ್ರ

ಹಂಬಂಟೋಟಾ, ಶ್ರೀಲಂಕಾ (ಪಿಟಿಐ): ಕಳೆದ ವಿಶ್ವಕಪ್‌ನಲ್ಲಿ ದುರ್ಬಲವೆನಿಸಿದ ತಂಡಗಳ ಎದುರು ಆಘಾತ ಅನುಭವಿಸಿ ಪಾಠ ಕಲಿತಿರುವ ಪಾಕಿಸ್ತಾನ ತಂಡದವರು ಈ ಬಾರಿಯ ವಿಶ್ವಕಪ್‌ನ ತಮ್ಮ ಮೊದಲ ಪಂದ್ಯದಲ್ಲಿ ಕೀನ್ಯಾ ವಿರುದ್ಧ ಅನಿರೀಕ್ಷಿತಕ್ಕೆ ಅವಕಾಶ ನೀಡದೆ 205 ರನ್‌ಗಳ ಸುಲಭ ಗೆಲುವು ಸಾಧಿಸಿದರು.

ಮಹಿಂದಾ ರಾಜಪಕ್ಷೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ‘ಎ’ ಗುಂಪಿನ ಲೀಗ್ ಪಂದ್ಯದಲ್ಲಿ ಪಾಕ್ ತಂಡದ ಮುಂಚೂಣಿಯ ವೇಗಿಗಳು ಪ್ರಭಾವಿ ಆಗಿದ್ದರೆ ಇನ್ನೂ ಹೆಚ್ಚಿನ ಅಂತರದ ವಿಜಯದ ಸಂಭ್ರಮ ಸಿಗುತ್ತಿತ್ತು. ಆದರೆ ಶೋಯಬ್ ಅಖ್ತರ್ ಹಾಗೂ ಅಬ್ದುಲ್ ರಜಾಕ್ ತಕ್ಕ ಪರಿಣಾಮ ಮಾಡಲಿಲ್ಲ. ಆದ್ದರಿಂದ 33.1 ಓವರುಗಳವರೆಗೆ ಕೀನ್ಯಾ ಇನಿಂಗ್ಸ್ ಹಿಗ್ಗಿತು.

ಶಾಹೀದ್ ಆಫ್ರಿದಿ ನಾಯಕತ್ವದ ಪಾಕ್ ಪಡೆಯು ತನ್ನ ಪಾಲಿನ ಐವತ್ತು ಓವರುಗಳಲ್ಲಿ ಏಳು ವಿಕೆಟ್‌ಗಳನ್ನು ಕಳೆದುಕೊಂಡು 317 ರನ್ ಪೇರಿಸಿಟ್ಟಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದು ಸಾರ್ಥಕ ಎನ್ನುವಷ್ಟು ರನ್‌ಗಳು ಬಂದಿದ್ದರಿಂದ ಆಫ್ರಿದಿ ಬಳಗದವರಿಗೆ ಸಮಾಧಾನ. ಆದರೆ ಅಂದುಕೊಂಡಷ್ಟು ಬೇಗ ಕೀನ್ಯಾವನ್ನು ಕಟ್ಟಿಹಾಕುವ ಲೆಕ್ಕಾಚಾರ ಸರಿ ಹೋಗಲಿಲ್ಲ.

ಜಿಮ್ಮಿ ಕಮಾಂಡೆ ನೇತೃತ್ವದ ತಂಡದವರು 112 ರನ್‌ಗಳು ಆಗುವರೆಗೆ ಪಾಕ್ ಬೌಲರ್‌ಗಳನ್ನು ಕಾಡಿದರು.
ಕಾಲಿನ್ಸ್ ಒಬುಯಾ (47; 58 ಎ., 3 ಬೌಂಡರಿ, 3 ಸಿಕ್ಸರ್) ಅವರಂತೂ ಭಾರಿ ಸಹನೆಯಿಂದ ಕ್ರೀಸ್‌ನಲ್ಲಿ ನಿಂತರು. ಆದರೆ ಅವರು ಸುರಿಸಿದ ಬೆವರು ಪ್ರಯೋಜನಕಾರಿ ಆಗಲಿಲ್ಲ. ಇನ್ನೊಂದು ಕೊನೆಯಲ್ಲಿ ವಿಕೆಟ್‌ಗಳು ಪತನಗೊಳ್ಳುತ್ತಾ ಸಾಗಿದ್ದರಿಂದ ಮೊತ್ತ ಹೆಚ್ಚಿಸಿ, ಪಾಕ್‌ಗೆ ಕಷ್ಟವಾಗುವಂತೆ ಮಾಡುವ ಕೀನ್ಯಾದವರ ಕನಸು ನನಸಾಗಲಿಲ್ಲ. 

ವಿಜಯಿ ತಂಡದ ನಾಯಕ ಶಾಹೀದ್ ಆಫ್ರಿದಿ (8-3-16-5) ಬೌಲಿಂಗ್ ದಾಳಿಯನ್ನು ಚುರುಕುಗೊಳಿಸಿದರು. ಅವರ ಪ್ರಯತ್ನದ ಫಲವಾಗಿಯೇ ಕೀನ್ಯಾದವರು ಇನ್ನಷ್ಟು ಹೊತ್ತು ಇನಿಂಗ್ಸ್ ಹಿಗ್ಗಿಸಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್‌ನಲ್ಲಿ ಪಾಕ್‌ಗೆ ಶಕ್ತಿ ನೀಡಿದ್ದು ಆಕ್ರಮಣಕಾರಿ ಆಟವಾಡಿದ ಉಮರ್ ಅಕ್ಮಲ್ (71; 52 ಎ., 8 ಬೌಂಡರಿ, 1 ಸಿಕ್ಸರ್). ಕಮ್ರನ್ ಅಕ್ಮಲ್, ಯೂನಿಸ್ ಖಾನ್ ಹಾಗೂ ಮಿಸ್ಬಾ ಉಲ್ ಹಕ್ ಅವರೂ ಅರ್ಧ ಶತಕ ಗಳಿಸುವಲ್ಲಿ ಯಶಸ್ವಿಯಾದರು.

ಸ್ಕೋರ್ ವಿವರ
ಪಾಕಿಸ್ತಾನ: 50 ಓವರುಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 317
ಮೊಹಮ್ಮದ್ ಹಫೀಜ್ ಸಿ ಸೆರೆನ್ ವಾಟರ್ಸ್ ಬಿ ಎಲಿಜಾ ಒಟೀನೊ  09
ಅಹ್ಮದ್ ಶೆಹ್ಜಾದ್ ಸಿ ಜಿಮ್ಮಿ ಕಮಾಂಡೆ ಬಿ ಥಾಮಸ್ ಒಡೊಯೊ  01
ಕಮ್ರನ್ ಅಕ್ಮಲ್ ಸ್ಟಂಪ್ಡ್ ಮೌರಿಸ್ ಔಮಾ ಬಿ ಶೆಮ್ ನೋಚೆ  55
ಯೂನಿಸ್ ಖಾನ್ ಎಲ್‌ಬಿಡಬ್ಲ್ಯು ಬಿ ಸ್ಟೀವ್ ಟಿಕೋಲೊ  50
ಮಿಸ್ಬಾ ಉಲ್ ಹಕ್ ಸಿ ಎಲಿಜಾ ಒಟೀನೊ ಬಿ ಜಿಮ್ಮಿ ಕಮಾಂಡೆ  65
ಉಮರ್ ಅಕ್ಮಲ್ ಸಿ ಕಾಲಿನ್ಸ್ ಒಬುಯಾ ಬಿ ಥಾಮಸ್ ಒಡೊಯೊ  71
ಶಾಹೀದ್ ಅಫ್ರಿದಿ ಎಲ್‌ಬಿಡಬ್ಲ್ಯು ಬಿ ಥಾಮಸ್ ಒಡೊಯೊ  07
ಅಬ್ದುಲ್ ರಜಾಕ್ ಔಟಾಗದೆ  08
ಅಬ್ದುರ್ ರೆಹಮಾನ್ ಔಟಾಗದೆ  05
ಇತರೆ: (ಲೆಗ್‌ಬೈ-3, ವೈಡ್-37, ನೋಬಾಲ್-6)  46
ವಿಕೆಟ್ ಪತನ: 1-11 (ಮೊಹಮ್ಮದ್ ಹಫೀಜ್; 5.3); 2-12 (ಅಹ್ಮದ್ ಶೆಹ್ಜಾದ್; 6.5); 3-110 (ಕಮ್ರನ್; 24.4); 4-155 (ಯೂನಿಸ್; 33.4); 5-273 (ಮಿಸ್ಬಾ; 46.5); 6-289 (ಉಮರ್; 48.2); 7-289 (ಆಫ್ರಿದಿ; 48.3).
ಬೌಲಿಂಗ್: ಥಾಮಸ್ ಒಡೊಯೊ 7-2-41-3 (ವೈಡ್-5), ಎಲಿಜಾ ಒಟೀನೊ 9-1-49-1 (ನೋಬಾಲ್-2), ನೆಹೆಮಿಯಾ ಒದಿಯಾಂಬೊ 7-0-65-0 (ನೋಬಾಲ್-3, ವೈಡ್-3), ಶೆಮ್ ನೋಚೆ 10-0-46-1 (ವೈಡ್-1), ಜಿಮ್ಮಿ ಕಮಾಂಡೆ 7-0-64-1 (ವೈಡ್-4), ಸ್ಟೀವ್ ಟಿಕೋಲೊ 9-0-44-1 (ನೋಬಾಲ್-1), ಕಾಲಿನ್ಸ್ ಒಬುಯಾ 1-0-5-0
ಕೀನ್ಯಾ: 33.1 ಓವರುಗಳಲ್ಲಿ 112
ಮೌರಿಸ್ ಔಮಾ ಸಿ ಕಮ್ರನ್ ಅಕ್ಮಲ್ ಬಿ ಉಮರ್ ಗುಲ್  16
ಸೆರೆನ್ ವಾಟರ್ಸ್ ರನ್‌ಔಟ್ (ಉಮರ್ ಅಕ್ಮಲ್)  17
ಕಾಲಿನ್ಸ್ ಒಬುಯಾ ಸಿ ಅಹ್ಮದ್ ಶೆಹ್ಜಾದ್ ಬಿ ಶಾಹೀದ್ ಆಫ್ರಿದಿ  47
ಸ್ಟೀವ್ ಟಿಕೋಲೊ ಬಿ ಶಾಹೀದ್ ಆಫ್ರಿದಿ  13
ತನ್ಮಯ್ ಮಿಶ್ರಾ ಎಲ್‌ಬಿಡಬ್ಲ್ಯು ಬಿ ಶಾಹೀದ್ ಆಫ್ರಿದಿ  06
ರಾಕೆಪ್ ಪಟೇಲ್ ಸಿ ಉಮರ್ ಅಕ್ಮಲ್ ಬಿ ಮೊಹಮ್ಮದ್ ಹಫೀಜ್  00
ಜಿಮ್ಮಿ ಕಮಾಂಡೆ ಎಲ್‌ಬಿಡಬ್ಲ್ಯು ಬಿ ಶಾಹೀದ್ ಆಫ್ರಿದಿ  02
ಥಾಮಸ್ ಒಡೊಯೊ ಎಲ್‌ಬಿಡಬ್ಲ್ಯು ಬಿ ಶಾಹೀದ್ ಆಫ್ರಿದಿ  00
ಒದಿಯಾಂಬೊ ರನ್‌ಔಟ್ (ಅಸದ್ ಶಫೀಕ್; ಬದಲಿ ಆಟಗಾರ)  00
ಶೆಮ್ ನೋಚೆ ಬಿ ಉಮರ್ ಗುಲ್  00
ಎಲಿಜಾ ಒಟೀನೊ ಔಟಾಗದೆ  00
ಇತರೆ: (ಬೈ-4, ಲೆಗ್‌ಬೈ-3, ವೈಡ್-3, ನೋಬಾಲ್-1)  11
ವಿಕೆಟ್ ಪತನ: 1-37 (ವಾಟರ್ಸ್; 9.1); 2-43 (ಔಮಾ; 12.2); 3-73 (ಟಿಕೋಲೊ; 22.2); 4-79 (ತನ್ಮಯ್ರಿ; 26.3); 5-85 (ಪಟೇಲ್; 27.5); 6-87 (ಕಮಾಂಡೆ; 28.3); 7-101 (ಒಡೊಯೊ; 30.5); 8-112 (ಒಬುಯಾ; 32.1); 9-112 (ಒದಿಯಾಂಬೊ; 32.5); 10-112 (ನೋಚೆ; 33.1).
ಬೌಲಿಂಗ್: ಶೋಯಬ್ ಅಖ್ತರ್ 5-1-10-0 (ವೈಡ್-1), ಅಬ್ದುಲ್ ರಜಾಕ್ 5-1-23-0, ಉಮರ್ ಗುಲ್ 4.1-0-12-2 (ನೋಬಾಲ್-1, ವೈಡ್-1), ಅಬ್ದುರ್ ರೆಹಮಾನ್ 7-1-18-0, ಶಾಹೀದ್ ಆಫ್ರಿದಿ 8-3-16-5, ಮೊಹಮ್ಮದ್ ಹಫೀಜ್ 4-1-26-1 (ವೈಡ್-1).
ಫಲಿತಾಂಶ: ಪಾಕಿಸ್ತಾನಕ್ಕೆ 205 ರನ್‌ಗಳ ಗೆಲುವು.
              ಪಂದ್ಯ ಶ್ರೇಷ್ಠ: ಉಮರ್ ಅಕ್ಮಲ್ (ಪಾಕಿಸ್ತಾನ).    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT