ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಏಕದಿನ ತಂಡದ ಅಭ್ಯಾಸ

Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ನಾಯಕ ಮಿಸ್ಬಾ ಉಲ್ ಹಕ್ ಒಳಗೊಂಡಂತೆ ಪಾಕಿಸ್ತಾನ ಏಕದಿನ ಕ್ರಿಕೆಟ್ ತಂಡದ ಆರು ಆಟಗಾರರು ಇಲ್ಲಿನ ಎಂ.ಎ. ಚಿದಂಬರಮ್ ಕ್ರೀಡಾಂಗಣದಲ್ಲಿ ಗುರುವಾರ ಕಠಿಣ ತಾಲೀಮು ಕೈಗೊಂಡರು.

ಪಾಕ್ ಟ್ವೆಂಟಿ-20 ತಂಡದಲ್ಲಿಲ್ಲದ ಈ ಆಟಗಾರರು ಗುರುವಾರ ಬೆಳಿಗ್ಗೆ ಚೆನ್ನೈಗೆ ಬಂದಿಳಿದರು. ಮಧ್ಯಾಹ್ನ 2.00 ಗಂಟೆಯ ವೇಳೆಗೆ ಕ್ರೀಡಾಂಗಣಕ್ಕೆ ಆಗಮಿಸಿದರಲ್ಲದೆ, ಸುಮಾರು ಹೊತ್ತು ಅಭ್ಯಾಸ ನಡೆಸಿದರು. ಈ ಆಟಗಾರರು ಶುಕ್ರವಾರ ಕೂಡಾ ಅಭ್ಯಾಸ ನಡೆಸಲಿದ್ದಾರೆ.

ಏಕದಿನ ತಂಡದ ಇತರ ಆಟಗಾರರು ಡಿಸೆಂಬರ್ 29 ರಂದು ಆಗಮಿಸಲಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಇಲ್ಲಿ ಡಿ. 30 ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT