ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಮೇಲೆ ಪ್ರಭುತ್ವದ ಗುರಿ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಪಾಕಿಸ್ತಾನವನ್ನು ದುರ್ಬಲಗೊಳಿಸಿ ಪ್ರಭುತ್ವ ಸಾಧಿಸುವುದೇ ಭಾರತದ ಗುರಿ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಆರೋಪಿಸಿದ್ದಾರೆ.

ಪ್ರಭುತ್ವ ಸಾಧಿಸುವುದು ಎಂದರೆ ಪಾಕಿಸ್ತಾನವನ್ನು ಭಾರತ ಸ್ವಾಧೀನ ಪಡಿಸಿಕೊಂಡು ಬಿಡುತ್ತದೆ ಎಂದರ್ಥವಲ್ಲ, ಅಂತಹ ಪ್ರಸಂಗ ಬರುವುದೂ ಇಲ್ಲ.  ಬಾಂಗ್ಲಾ ದೇಶ ಸ್ವಾತಂತ್ರ್ಯ ಪಡೆಯಲು ಭಾರತ ನೆರವು ನೀಡಿತೇ ಹೊರತು ಆ ದೇಶವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲಿಲ್ಲ. ಅಂದರೆ, ಒಂದು ದೇಶದ ವಿದೇಶಾಂಗ, ಆರ್ಥಿಕ, ವಾಣಿಜ್ಯ ನೀತಿಗಳ ಮೇಲೆ ಪರೋಕ್ಷ ಹಿಡಿತ ಸಾಧಿಸಲು ಮುಂದಾಗುವುದು ಎಂದರ್ಥ.

 ಇದರಿಂದ ಅಂತರ ರಾಷ್ಟ್ರೀಯ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗದಿದ್ದರೂ ಕನಿಷ್ಠ ಪ್ರಾದೇಶಿಕ ಶಕ್ತಿಯಾಗಬಹುದು ಎಂಬ ಇರಾದೆ ಭಾರತಕ್ಕೆ ಇರಬಹುದು  ಎಂದು ಅವರು ಇಲ್ಲಿನ ಚಿಂತಕರ ಚಾವಡಿಯಲ್ಲಿ ಟೀಕಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT