ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌- ಲಂಕಾ ಟೆಸ್ಟ್‌ ಇಂದಿನಿಂದ

Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವಿನ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗಲಿದೆ.

ಸ್ಪಿನ್ನರ್‌ಗಳ ನೆರವಿನಿಂದ ಶ್ರೀಲಂಕಾ ತಂಡವನ್ನು ಮಣಿಸುವ ಲೆಕ್ಕಾಚಾರದಲ್ಲಿ ಮಿಸ್ಬಾ ಉಲ್‌ ಹಕ್‌ ನೇತೃತ್ವದ ಪಾಕಿಸ್ತಾನ ತಂಡ ಇದೆ. ಅದೇ ರೀತಿ ಲಂಕಾ ಕೂಡಾ ಜಯದ ಕನಸಿನಲ್ಲಿದೆ.

ಸೋಮವಾರ ಇಲ್ಲಿ ಮಳೆ ಸುರಿದ ಕಾರಣ ಉಭಯ ತಂಡಗಳಿಗೆ ಪೂರ್ಣ ಪ್ರಮಾಣದ ಅಭ್ಯಾಸ ನಡೆಸಲು ಆಗಲಿಲ್ಲ. ಆದರೆ ಹವಾಮಾನ ಮುನ್ಸೂಚನೆ ಪ್ರಕಾರ ಮುಂದಿನ ಐದು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ.

ಅಬುಧಾಬಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. ಈ ಪಂದ್ಯದಲ್ಲಿ ಪಾಕ್‌ ಮೇಲುಗೈ ಸಾಧಿಸಿತ್ತು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಏಂಜೆಲೊ ಮ್ಯಾಥ್ಯೂಸ್ ಆಕರ್ಷಕ 157 ರನ್‌ ಗಳಿಸಿದ್ದ ಕಾರಣ ಲಂಕಾ ತಂಡ ಸೋಲನ್ನು ತಪ್ಪಿಸಿಕೊಂಡಿತ್ತು.
ಪಾಕ್‌ ತಂಡ ಸ್ಪಿನ್ನರ್‌ಗಳಾದ ಸಯೀದ್‌ ಅಜ್ಮಲ್‌ ಮತ್ತು ಅಬ್ದುಲ್‌ ರಹ್ಮಾನ್‌ ಅವರನ್ನು ನೆಚ್ಚಿಕೊಂಡಿದೆ. ಈ ಕ್ರೀಡಾಂಗಣದಲ್ಲಿ ಅಜ್ಮಲ್‌ ಒಟ್ಟು 24 ವಿಕೆಟ್‌ಗಳನ್ನು ಪಡೆದಿದ್ದಾರೆ.

‘ಇಲ್ಲಿನ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡುತ್ತದೆ ಎಂಬುದು ಇತಿಹಾಸದಿಂದ ತಿಳಿಯಬಹುದು. ನಮ್ಮ ಇಬ್ಬರು ಸ್ಪಿನ್ನರ್‌ಗಳು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ’ ಎಂದು ಮಿಸ್ಬಾ ಉಲ್‌ ಹಕ್‌ ಹೇಳಿದ್ದಾರೆ.

2011 ರಲ್ಲಿ ಇಲ್ಲಿ ನಡೆದ ಪಂದ್ಯದಲ್ಲಿ ಪಾಕ್‌ ತಂಡ ಲಂಕಾ ವಿರುದ್ಧ ಜಯ ಸಾಧಿಸಿತ್ತು. ಆ ಮೂಲಕ ಸರಣಿಯನ್ನು 1-0 ರಲ್ಲಿ ತನ್ನದಾಗಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT