ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟಣ್ಣಯ್ಯ ಬಂಧನಕ್ಕೆ ವಿರೋಧ

Last Updated 20 ಅಕ್ಟೋಬರ್ 2012, 8:00 IST
ಅಕ್ಷರ ಗಾತ್ರ

ಬ್ಯಾಡಗಿ: ಕಬ್ಬಿನ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಬಂಧಿಸಿದ ಪೊಲೀಸ್‌ರ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಶುಕ್ರವಾರ ಹಠಾತ್ ಪ್ರತಿಭಟನೆ ನಡೆಸಿ ತಹಶೀಲ್ದಾರ ಮಹಮ್ಮದ ಜುಬೈರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಇಲ್ಲಿಯ ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ ಕಾವೇರಿ ನೀರನ್ನು ರಾತ್ರೋ ರಾತ್ರಿ ತಮಿಳುನಾ ಡಿಗೆ ಹರಿಸಿದ ರಾಜ್ಯಸರ್ಕಾರ ನದಿ ಪಾತ್ರದಲ್ಲಿರುವ ರೈತರನ್ನು ನಿದ್ದೆಗೆಡಿ ಸಿದೆ. ಹಿಂದಿನಿಂದಲೂ ಕಬ್ಬಿನ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ರೈತರು ಹಾಗೂ ರೈತಪರ ಸಂಘಟನೆ ಗಳು ಆಗ್ರಹಿಸುತ್ತಿದ್ದರೂ ಅದನ್ನು ತಿರ ಸ್ಕರಿಸುತ್ತಿರುವ ಸರಕಾರ ಇಬ್ಬಗೆ ನೀತಿ ಯನ್ನು ಅನುಸರಿಸುತ್ತಿದೆ ಎಂದರು.

ಬಂಧಿಸಿದ ರೈತ ಮುಖಂಡರನ್ನು ಕೂಡಲೆ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ನಗರ ಅಧ್ಯಕ್ಷ ಚಿಕ್ಕಪ್ಪ ಛತ್ರದ, ಬಸವ ರಾಜ ಸಂಕಣ್ಣನವರ ಶಿವಮೂರ್ತೆಪ್ಪ ಉಪ್ಪಾರ, ನಾಗರಾಜ ಗುಬ್ಬಿ, ಮಂಜು ತೋಟದ, ಪರಮೇಶಯ್ಯ ಮಠದ, ಆನಂದಪ್ಪ ಮಲ್ಲಾಡದ, ಶಾಂತಪ್ಪ ನಾಯ್ಕರ,  ಮೌನೇಶ ಕಮ್ಮೋರ, ಈರಪ್ಪ ದ್ಯಾಮನಗೌಡ್ರ, ಶಿವಪ್ಪ ಬಣಕಾರ, ಲಕ್ಷಣ ಸೊಟ್ಟೇರ ಹಾಗೂ ಇನ್ನಿತರರ ಪಾಲ್ಗೊಂಡಿದ್ದರು.

ಹೊಸರಿತ್ತಿಯಲ್ಲಿ ಸಂಗೀತೋತ್ಸವ 22ರಂದು
ಹೊಸರಿತ್ತಿ:
ದಸರಾ ಹಬ್ಬದ ನಿಮಿತ್ತ ಗುದ್ಧಲೀಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಇದೇ 22ರಂದು ಇಲ್ಲಿನ ಕೃಷ್ಣ ಟಾಕೀಜ್‌ನಲ್ಲಿ ಸಂಗೀತೋತ್ಸವ ಕಾರ್ಯಕ್ರಮ ಜರುಗಲಿದೆ. ಆಕಾಶವಾಣಿ ಹಾಗೂ ದೂರ ದರ್ಶನ ಖ್ಯಾತ ಕಲಾವಿದರಾದ ರೇಣುಕಾ ನಾಕೋಡ, ಅಯ್ಯಪ್ಪಯ್ಯ ಹಲಗಲಿಮಠ, ಹುಸೇನ್ ಬಾಬು, ಶಿವಕುಮಾರ ಹಡಗಲಿ, ಶಂಕ್ರಪ್ಪ ಭೋಕನವರ, ಭಾಗ್ಯಮ್ಮ ಕೋಡಬಾಳ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಜನಪ್ರತಿನಿಧಿಗಳು ಸೇರಿಂತೆ ಅನೇಕರು ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT