ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟರಾಜರ ತತ್ವಾದರ್ಶ ದಾರಿದೀಪ: ನಾಯಕ

Last Updated 25 ಡಿಸೆಂಬರ್ 2012, 6:28 IST
ಅಕ್ಷರ ಗಾತ್ರ

ಗದಗ: ನಾಡು, ನುಡಿ ಮತ್ತು ಜನಸೇವೆಗೆ ತಮ್ಮ ಜೀವನ ಮುಡಿ ಪಾಡಿಗಿರಿಸಿದ ಡಾ.ಪುಟ್ಟರಾಜ ಗವಾಯಿ ಹಾಗೂ ಮೊದಲ ನಾಡಗೀತೆ ಬರೆದ ಹುಯಿಲಗೋಳ ನಾರಾಯಣ ರಾವ್ ಅವರ ತತ್ವಾದರ್ಶಗಳು ಯುವ ಪೀಳಿಗೆಗೆ ದಾರಿದೀಪ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದ ಡಾ.ಪುಟ್ಟರಾಜ ಕಲಾಭವನದಲ್ಲಿ ಸೋಮವಾರ ನಾಡಕವಿ ಹುಯಿಲ ಗೋಳ ನಾರಾಯಣರಾವ್ ಕಲಾ ಮತ್ತು ಸಂಸ್ಕೃತಿ ರಾಜ್ಯ ಸಮಿತಿ ಆಶ್ರ ಯದಲ್ಲಿ  ಪಂ.ಡಾ.ಪುಟ್ಟರಾಜ ಗವಾಯಿಗಳವರ ದ್ವಿತೀಯ ಪುಣ್ಯ ಸ್ಮರಣೋತ್ಸವ ಹಾಗೂ ನಾಡಕವಿ ಹುಯಿಲಗೋಳ ನಾರಾಯಣರಾವ್ ಅವರ 128 ನೇ ಜಯಂತಿ ಆಚರಣೆ ಅಂಗವಾಗಿ ನಡೆದ ರಾಜ್ಯ ಮಟ್ಟದ ರಂಗ ಕಲಾಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಿಗ್ಗಜರ ಸಾಧನೆ ಮತ್ತು ತತ್ವಾದರ್ಶಗಳು ಇತರರಿಗೆ ಮಾದರಿ ಯಾಗಿವೆ. ಅವರಲ್ಲಿನ ಒಂದೆ ರಡು ಅಂಶಗಳನ್ನಾದರೂ ನಮ್ಮ ಬದು ಕಿಗೆ ಸ್ಪೂರ್ತಿಯಾಗಿಸಿಕೊಂಡು ನಡೆದರೆ ಸಾಕು ಜೀವನ ಸಾರ್ಥಕ ವಾಗಲಿದೆ.  ಜೀವನದಲ್ಲಿ ನೆಮ್ಮದಿ ಸಿಗಲು ಕಲೆ ಒಂದು ಸಾಧನ ಎಂದು ನಾಯಕ ತಿಳಿಸಿದರು.

ಕಿತ್ತೂರ ಚೆನ್ನಮ್ಮ ಸರ್ವಧರ್ಮ ಕ್ಷೇಮಾಭಿವೃದ್ಧಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಇಂದಿರಾ ಗಾಂಧಿ ಮುಕ್ತ ವಿವಿ ವಿಭಾಗೀಯ ನಿರ್ದೇಶಕ ಜಿ.ಎಚ್.ಇಮ್ರೋಪೂರ,  ಆರ್.ಸಿ.ಪಿ ಪಕ್ಷದ ರಾಜ್ಯಾಧ್ಯಕ್ಷ ಪಿ.ಸುಬ್ರಹ್ಮಣ್ಯರೆಡ್ಡಿ ಮಾತನಾಡಿದರು.

ಹಿರಿಯ ರಂಗಸಾಧಕ ಸಿಜಿಬಿ ಹಿರೇಮಠ ಅವರ 68 ನೇ ಹುಟ್ಟುಹಬ್ಬ ಹಾಗೂ ಅವರಿಂದ ಸಂಸ್ಥಾಪಿತ ಸಿಜಿಬಿ ಮಿತ್ರಮಂಡಳಿಯ 43 ನೇ ವಾರ್ಷಿ ಕೋತ್ಸವ ನಿಮಿತ್ತ ಅವರನ್ನು ಅಭಿಮಾ ನಿಗಳ ಪರವಾಗಿ ಇದೆ ಸಂದರ್ಭದಲ್ಲಿ ಸತ್ಕರಿಸಿ ಗೌರ ವಿಸಲಾಯಿತು.
ಹಿರಿಯ ರಂಗಭೂಮಿ ಕಲಾವಿದರಿಗೆ ಅಭಿನಂದನಾ ಪತ್ರ ವಿತರಣೆ, ಡಾ.ಪುಟ್ಟ ರಾಜರ ಕುರಿತಾದ ಗ್ರಂಥವೊಂದರ ಬಿಡುಗಡೆ ಕಾರ್ಯಕ್ರಮ ಕೂಡ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT