ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರ್ವಸತಿ ಕೇಂದ್ರದ ಸೌಕರ್ಯಕ್ಕೆ ಅನುದಾನ

Last Updated 15 ಅಕ್ಟೋಬರ್ 2012, 4:30 IST
ಅಕ್ಷರ ಗಾತ್ರ

ಕೊಲ್ಹಾರ: ಕೊಲ್ಹಾರ ಪುನರ್ವಸತಿ ಕೇಂದ್ರಕ್ಕೆ ಮೂಲ ಸೌಕರ್ಯ ಒದಗಿಸುವುದರ ಜೊತೆಗೆ  ತಾ.ಪಂ.ನ ವಿವಿಧ ಯೋಜನೆಗಳಡಿ ಲಭ್ಯವಿರುವ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸಿ,ಎಲ್ಲಾ ವಾರ್ಡ್‌ಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಾ.ಪಂ. ಸದಸ್ಯ ಕಲ್ಲು ಬ. ಸೊನ್ನದ ಹೇಳಿದರು.

ಸ್ಥಳೀಯ ಬನಶಂಕರಿ ದೇವಸ್ಥಾನ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ರೂ. 50 ಸಾವಿರ ಅನುದಾನದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 2011-12ನೇ ಸಾಲಿನ 13ನೇ ಹಣಕಾಸು ಯೋಜನೆ ಅಡಿಯಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕೂಡಲೇ ಪೂರ್ಣಗೊಳಿಸಲು ಸೂಚಿಸಲಾಗಿದೆ.

18 ತಿಂಗಳ ನನ್ನ ಅಧಿಕಾರ ಅವಧಿಯಲ್ಲಿ ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ಅಂದಾಜು ಒಟ್ಟು ರೂ. 14 ಲಕ್ಷ ಅನುದಾನವನ್ನು ಮಂಜೂರು ಮಾಡಿಸಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ, ಇದರಲ್ಲಿ ಸಂತೆ ಕಟ್ಟೆ, ಸಮುದಾಯ ಭವನ ನಿರ್ಮಾಣ, ಶಾಲೆಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ, ಸೋಲಾರ್ ವಿದ್ಯುತ್ ಉಪಕರಣಗಳ ಅಳವಡಿಕೆ ಕಾರ್ಯ ನಡೆಯುತ್ತಿವೆ ಎಂದರು.

ಬಡವರ, ದೀನದಲಿತರ ನೊಂದವರ ಧ್ವನಿಯಾಗಿ ಅವರ ಕಷ್ಟ ಸುಖಗಳಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಆಶ್ರಯ, ಅಂಬೇಡ್ಕರ, ಇಂದಿರಾ ಆವಾಜ್ ವಸತಿ ಯೋಜನೆಗಳು ಮತ್ತು ಸರಕಾರದ ಎಲ್ಲ ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಗೆ ಸಿಗುವಂತಾಗಲು ಸದಾ ಕ್ರೀಯಾಶೀಲನಾಗಿರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಬಸಪ್ಪ ಔರಸಂಗ, ಬಸವರಾಜ ಚೌಡಪ್ಪಗೋಳ, ಬಸಪ್ಪ ಬಳೂರಗಿ, ಸಂಗು ಹುಲ್ಯಾಳ, ದುಂಡಪ್ಪ ಕೋಠಾರಿ, ಕಲ್ಲಪ್ಪ ಮೇಲಗಿರಿ, ವಿಜಕುಮಾರ ನೀಲವಾಣಿ, ಉಮೇಶ ಅಮಾಸಿ, ಪರಶುರಾಮ ಬೀಳಗಿ, ಅನಿಲ ಆಸಂಗಿ, ವಿನೋದ ಕಲ್ಯಾಣಿ, ಅಶೋಕ ಜಿಡ್ಡಿಬಾಗಿಲು, ರಾಮಣ್ಣ ಸೊನ್ನದ, ಸಿದ್ದು ಗೊಳಸಂಗಿ, ಸಿದ್ದರಾಮ ಮೇಲಗಿರಿ, ವಿಜಯ ವಡ್ಡರ, ಶ್ರಿಶೈಲ ಹಡಪದ, ಪ್ರಮುಖರು ಉಪಸ್ಥಿತರಿದ್ದರು. ರುದ್ರಯ್ಯ ಮಠಪತಿ ಪೂಜಾ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT