ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ ಲವರ್ಸ್ ಅಸೋಸಿಯೇಷನ್, ಜಿಲ್ಲಾಡಳಿತದ ವತಿಯಿಂದ ಶ್ವಾನ ಪ್ರದರ್ಶನ

Last Updated 13 ಫೆಬ್ರುವರಿ 2012, 6:05 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಬೌ ಬೌ ಕುಂಯಿ ಕುಂಯಿ ರಾಗಾಲಾಪ ಕೇಳಿಸುತ್ತಿತ್ತು. ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್, ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಉತ್ಸವದ ಅಂಗವಾಗಿ ಇಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಏರ್ಪಡಿಸಲಾಗಿತ್ತು.

ಜರ್ಮನ್ ಷೆಫರ್ಡ್, ಪಗ್, ಮಿನಿಯೇಚರ್, ಸೈಂಟ್ ಬರ್ನಾಲ್ಡ್, ಡಾಲ್ ಮಿಷನ್, ಬೀಗಲ್, ಮುಧೋಳ ಸೇರಿದಂತೆ 32 ತಳಿಗಳ 280 ನಾಯಿಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಕಾರು, ಆಟೋರಿಕ್ಷಾ, ಬೈಕ್‌ಗಳಲ್ಲಿ ನಾಯಿ ಮಾಲೀಕರು ತಮ್ಮ ಶ್ವಾನಗಳನ್ನು ಹೆಮ್ಮೆಯಿಂದ ತರುತ್ತಿದ್ದರು. ದೈತ್ಯ ಗಾತ್ರದ ನಾಯಿಯಿಂದ ಹಿಡಿದು ಬೆಕ್ಕಿನಮರಿ ಗಾತ್ರದವರೆಗೂ ಇದ್ದ ವಿವಿಧ ತಳಿಯ ಶ್ವಾನಗಳು ಗಮನಸೆಳೆದವು.

ಇದೇ ಸಂದರ್ಭದಲ್ಲಿ ನಾಯಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಉಚಿತವಾಗಿ ರೇಬಿಸ್ ಲಸಿಕೆಯನ್ನೂ ಹಾಕಿಸಲಾಯಿತು. ನಾಯಿ ಆಹಾರ, ಅಲಂಕಾರ ಸಾಮಗ್ರಿಗಳು, ಔಷಧಿಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳೂ ಇದ್ದವು. ನಾಯಿಗಳ ತಳಿ ಸ್ವಭಾವ, ವಿಧೇಯತೆ, ಆರೋಗ್ಯ, ಭಾಷೆ ಅನುಸರಣೆ ಇವುಗಳ ಆಧಾರದಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
 
ಬೆಂಗಳೂರು ಕೆನಲ್ ಕ್ಲಬ್‌ನ ಡಾ.ಜಯರಾಮಯ್ಯ, ರವಿಕುಮಾರ್ ತೀರ್ಪುಗಾರರಾಗಿದ್ದರು. ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಮಹೇಶ್ವರಗೌಡ ಸಂಜೆ ವೇಳೆಗೆ ಬಹುಮಾನ ವಿತರಿಸಿದರು. ಪಶುವೈದ್ಯ, ಸಂಘಟಕ ಡಾ.ಕೆ.ಬಿ. ಲಿಂಗರಾಜು, ಪೆಟ್ ಲವರ್ಸ್ ಅಸೋಸಿಯೇಷನ್ ಅಧ್ಯಕ್ಷ ವೀರೇಶ್ ಯಾದವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT