ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಕ್ರೀಡಾಕೂಟ: ಕರ್ನಾಟಕ ಪರಾಭವ

Last Updated 18 ಡಿಸೆಂಬರ್ 2010, 7:40 IST
ಅಕ್ಷರ ಗಾತ್ರ

ಬೆಂಗಳೂರು: ಆತಿಥೇಯ ಕರ್ನಾಟಕ ತಂಡದವರು 59ನೇ ಅಖಿಲ ಭಾರತ ಪೊಲೀಸ್ ಕ್ರೀಡಾ ಕೂಟದ ಕಬಡ್ಡಿ ಟೂರ್ನಿ ಪುರುಷರ ವಿಭಾಗದ ‘ಎಫ್’ ಗುಂಪಿನ ಆರಂಭ ಪಂದ್ಯದಲ್ಲಿ ಸೋಲು ಅನುಭವಿಸಿದರು. ಕೋರಮಂಗಲ ಕೆ.ಎಸ್.ಆರ್.ಪಿ. ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ನಡೆದ ‘ಎಫ್’ ಗುಂಪಿನ ಲೀಗ್ ಪಂದ್ಯದಲ್ಲಿ ತಮಿಳುನಾಡು ತಂಡ 21-19 ರಲ್ಲಿ ಕರ್ನಾಟಕ ತಂಡವನ್ನು ಮಣಿಸಿತು.

ಟೂರ್ನಿ ಇತರ ಪಂದ್ಯಗಳಲ್ಲಿ ‘ಡಿ’ ಗುಂಪಿನಲ್ಲಿ ಪಾಂಡಿಚೇರಿ 60-32 ರಲ್ಲಿ ಜಾರ್ಖಂಡ್ ಮೇಲೂ, ‘ಸಿ’ ಗುಂಪಿನಲ್ಲಿ ಚತ್ತೀಸ್‌ಗಡ 36-24 ರಲ್ಲಿ ಮಣಿಪುರ ವಿರುದ್ಧವೂ, ‘ಬಿ’ ಗುಂಪಿನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ 23-21 ರಲ್ಲಿ ಆರ್.ಪಿ.ಎಫ್. ಮೇಲೂ, ’ಇ’ ಗುಂಪಿನಲ್ಲಿ ಹಿಮಾಚಲ ಪ್ರದೇಶ ತಂಡ 37-26 ರಲ್ಲಿ ರಾಜಾಸ್ತಾನ ವಿರುದ್ಧವೂ, ‘ಜಿ’ ಗುಂಪಿನಲ್ಲಿ ಒರಿಸ್ಸಾ 23-20 ರಲ್ಲಿ ಮಧ್ಯಪ್ರದೇಶ ಮೇಲೂ, ‘ಎಚ್’ ಗುಂಪಿನಲ್ಲಿ ಪಶ್ಚಿಮಬಂಗಾಳ 41-17 ರಲ್ಲಿ ಗುಜರಾತ್ ವಿರುದ್ಧವೂ, ‘ಎ’ ಗುಂಪಿನಲ್ಲಿ ಸಿ.ಐ.ಎಸ್.ಎಫ್ 19-14 ರಲ್ಲಿ ಮಹಾರಾಷ್ಟ್ರ ಮೇಲೂ ಗೆಲುವು ಸಾಧಿಸಿತು.

ಬ್ಯಾಸ್ಕೆಟ್‌ಬಾಲ್: ಕರ್ನಾಟಕ ತಂಡಕ್ಕೆ ಜಯ: ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬ್ಯಾಸ್ಕೆಟ್‌ಬಾಲ್ ಟೂರ್ನಿ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡದವರು 77-74 (ವಿರಾಮದ ಸ್ಕೋರು: 37-36) ರಲ್ಲಿ ಪ್ರಬಲ ಸಿ.ಐ.ಎಸ್.ಎಫ್. ಮೇಲೆ ಗೆದ್ದರು. ವಿಜಯಿ ತಂಡದ ಲಕ್ಷ್ಮಣ್ ಗಸ್ತಿ (18), ಎಸ್.ಜಿ. ಮಹೇಶ್ (24), ರಾಮಕೃಷ್ಣ (21) ಹಾಗೂ ಎದುರಾಳಿ ತಂಡದ ಎ.ಎ. ಸತ್ಯಪತಿ (15) ಉತ್ತಮ ಗುರಿ ಎಸೆತದ ಆಟವಾಡಿದರು.

ಇದೇ ಇತರ ಪಂದ್ಯಗಳಲ್ಲಿ ಮಹಾರಾಷ್ಟ್ರ 64-55 (41-30) ರಲ್ಲಿ ಎಸ್.ಎಸ್.ಬಿ. ಮೇಲೂ, ಸಿ.ಆರ್.ಪಿ. ಎಫ್ 66-50 (24-22) ರಲ್ಲಿ ಉತ್ತರಖಂಡ ವಿರುದ್ಧವೂ, ಹರಿಯಾಣ 71-44 (50-25) ರಲ್ಲಿ ಪಶ್ಚಿಮಬಂಗಾಳ ಮೇಲೂ, ಜಮ್ಮು ಮತ್ತು ಕಾಶ್ಮೀರ 69-61 (30-31) ರಲ್ಲಿ ಉತ್ತರಪ್ರದೇಶ ವಿರುದ್ಧವೂ, ಮಧ್ಯಪ್ರದೇಶ 61-35 (29-18) ರಲ್ಲಿ ಆರ್.ಪಿ.ಎಫ್ ಮೇಲೂ, ಪಂಜಾಬ್ 60-29 (32-16) ರಲ್ಲಿ ಕೇರಳ ವಿರುದ್ಧವೂ, ಬಿ.ಎಸ್.ಎಫ್. 81-34 (44-19) ರಲ್ಲಿ ಜಾರ್ಖಂಡ್ ಮೇಲೂ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT