ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಸಿಬ್ಬಂದಿ ಕೆಲಸಸ್ನೇಹಮಹಿ : ರಾಮಸುಬ್ಬ

Last Updated 3 ಏಪ್ರಿಲ್ 2011, 9:35 IST
ಅಕ್ಷರ ಗಾತ್ರ

ಮೈಸೂರು: ‘ಬ್ರಿಟೀಷ್ ಕಾಲದಿಂದಲೇ ಪೊಲೀಸ್ ವ್ಯವಸ್ಥೆ ಆರಂಭವಾಯಿತು. ಹಾಗಾಗಿ ಬ್ರಿಟೀಷರ ದಬ್ಬಾಳಿಕೆ ಮನೋಭಾವ ಪೊಲೀಸ್ ಇಲಾಖೆಯಲ್ಲಿ ಇದೆ ಎಂಬ ಆರೋಪ ಇದೆ. ಆದರೆ ಇದನ್ನು ತಳ್ಳಿಹಾಕುವ ನಿಟ್ಟಿನಲ್ಲಿ ಇಲಾಖೆಯಲ್ಲಿ ‘ಸ್ನೇಹಮಹಿ ಪೊಲೀಸ್’ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊ ಳ್ಳಲಾಗಿದೆ’ ಎಂದು ನಿವೃತ್ತ ಎಸ್ಪಿ ರಾಮಸುಬ್ಬ ಇಲ್ಲಿ ತಿಳಿಸಿದರು.
 

ನಗರದ ಸಿಎಆರ್ ಮೈದಾನದಲ್ಲಿ ಶನಿವಾರ ನಡೆದ ‘ಪೊಲೀಸ್ ಧ್ವಜ ದಿನಾಚರಣೆ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಪೊಲೀಸ್ ಪಥಸಂಚಲನದಿಂದ ಗೌರವ ವಂದನೆ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.‘ಪೊಲೀಸ್ ಕರ್ತವ್ಯಕ್ಕೆ ಸಹಕಾರ ನೀಡಲು ನಾಗರಿಕರನ್ನು ಬಳಸಿಕೊಳ್ಳಲಾಗಿದೆ. ನಾಗರಿಕ ಹೊಸ ಬೀಟ್ ಸದಸ್ಯರ ಗುಂಪನ್ನು ರಚಿಸಲಾಗಿದೆ. ನಾಗರಿಕರು ಸಮಾಜದ ಆಗು-ಹೋಗುಗಳ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಅಗತ್ಯ ಮಾಹಿತಿ ನೀಡಲಿದ್ದಾರೆ’ ಎಂದು ತಿಳಿಸಿದರು.
 

‘ಪೊಲೀಸ್ ಸಿಬ್ಬಂದಿ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಬೇಕು. ಇದರಿಂದ ಕುಟುಂಬದವರು ಮತ್ತು ಅವಲಂಬಿತರ ಹಿತರಕ್ಷಣೆ ನೋಡಿಕೊಳ್ಳಲು ಕಷ್ಟವಾಗುತ್ತದೆ. ಕರ್ತವ್ಯದಲ್ಲಿಯೇ ಹೆಚ್ಚು ಸಿಬ್ಬಂದಿ ತೊಡಗುವುದರಿಂದ ಕುಟುಂಬ ದವರಿಂದ ದೂರ ಇರುವುದು ಅನಿವಾರ್ಯ. ಹಾಗಾಗಿ ಕರ್ತವ್ಯ ಬಿಟ್ಟು ಬೇರೆ ವಿಚಾರಗಳ ಬಗ್ಗೆಯೂ ಆಲೋಚನೆ ಮಾಡಲು ಸಿಬ್ಬಂದಿಗೆ ಸಮಯವಿರುವುದಿಲ್ಲ’ ಎಂದು ತಿಳಿಸಿದರು.
 

‘ಪ್ರಾಣವನ್ನು ಲೆಕ್ಕಿಸದೆ ಅನೇಕ ಸಿಬ್ಬಂದಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ ಉದಾಹರಣೆಗಳಿವೆ. ಅಂತಹವರ ಸಾಧನೆಯನ್ನು ಗುರುತಿಸಿ  ಪದಕ, ಪ್ರಶಸ್ತಿಗಳನ್ನು ನೀಡುತ್ತಾ ಬರಲಾಗಿದೆ. ಇದು ಇತರೆ ಸಿಬ್ಬಂದಿಗೆ ಪ್ರೇರಣೆಯಾಗಿದೆ. ಸೇನಾ ಕ್ಯಾಂಟೀನ್ ಮಾದರಿಯಲ್ಲಿ ಪೊಲೀಸ್ ಇಲಾಖೆಯಲ್ಲೂ ಕ್ಯಾಂಟೀನ್ ತೆರೆದರೆ ಸಿಬ್ಬಂದಿಗೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
ದಕ್ಷಿಣ ವಲಯ ಐಜಿಪಿ ಅಮರ್‌ಕುಮಾರ್ ಪಾಂಡೆ, ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಎ.ಎಸ್.ಎನ್.ಮೂರ್ತಿ ಉಪಸ್ಥಿತರಿದ್ದರು. ನಗರ ಪೊಲೀಸ್ ಆಯುಕ್ತ ಸುನಿಲ್ ಅಗರವಾಲ್ ಸ್ವಾಗತಿಸಿದರು. ಎಎಸ್ಪಿ ವೆಂಕಟಸ್ವಾಮಿ ಧ್ವಜ ದಿನಾಚರಣೆ ಮಹತ್ವ ತಿಳಿಸಿದರು.
 

ನಿವೃತ್ತ ಪೊಲೀಸ್ ಅಧಿಕಾರಿಗಳಾದ ವೆಂಕಟಕೃಷ್ಣಯ್ಯ, ವಿಠಲ್, ನಟೇಶ್, ರಾಮಚಂದ್ರ, ಲಕ್ಷ್ಮಯ್ಯ, ಅಮೀರ್‌ಖಾನ್ ಅವರನ್ನು ಸನ್ಮಾನಿಸಲಾಯಿತು. ಸಶಸ್ತ್ರ ಮೀಸಲು ಪಡೆ ಇನ್ಸ್‌ಪೆಕ್ಟರ್ ಶಿವಕುಮಾರಯ್ಯ ಅವರ ನೇತೃತ್ವದಲ್ಲಿ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಆಕರ್ಷಕ ಪಥಸಂಚಲನ ನಡೆಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT