ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊವೆಲ್‌ಗೆ ಫಿಸಿಯೊ ತಿರುಗೇಟು

Last Updated 17 ಜುಲೈ 2013, 19:45 IST
ಅಕ್ಷರ ಗಾತ್ರ

ಪ್ಯಾರಿಸ್, ಫ್ರಾನ್ಸ್ (ಎಎಫ್‌ಪಿ): ಉದ್ದೀಪನ ಮದ್ದು ಸೇವನೆ ವಿವಾದಕ್ಕೆ ಸಂಬಂಧಿಸಿದಂತೆ ಜಮೈಕಾದ ಅಸಾಫಾ ಪೊವೆಲ್ ಹಾಗೂ ಶೇರೊನ್ ಸಿಂಪ್ಸನ್ ಮಾಡಿರುವ ಆರೋಪಕ್ಕೆ ಕೆನಡಾದ ಫಿಸಿಯೊ ಕ್ರಿಸ್ಟೋಫರ್ ಕ್ಸುರೆಬ್ ಕಿಡಿಕಾರಿದ್ದಾರೆ.

ಉದ್ದೀಪನ ಮದ್ದು ಸೇವಿಸಿದ ಸಂಕಷ್ಟ ಎದುರಿಸುತ್ತಿರುವ ಶ್ರೇಷ್ಠ ಅಥ್ಲೀಟ್‌ಗಳಾದ ಪೊವೆಲ್ ಮತ್ತು ಸಿಂಪ್ಸನ್ ಅವರು, `ನಮ್ಮ ಈ ಸ್ಥಿತಿಗೆ ಫಿಸಿಯೊ ಕಾರಣ' ಎಂದು ಆರೋಪಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಫಿಸಿಯೊ ಕ್ಸುರೆಬ್ `ಪೊವೆಲ್ ಯಾವಾಗಲೂ ಕಠಿಣ ಅಭ್ಯಾಸ ನಡೆಸುತ್ತಿದ್ದರು. 2013ರ ಮೇ ತಿಂಗಳಲ್ಲಿ ಅವರು ಗಾಯದಿಂದ ಪೂರ್ಣವಾಗಿ ಚೇತರಿಸಿಕೊಂಡು ಅಭ್ಯಾಸ ಆರಂಭಿಸಿದ್ದರು. ಅವರ ಬಗ್ಗೆ ನನಗೆ ತುಂಬಾ ಗೌರವವಿತ್ತು. ನನ್ನ ವಿರುದ್ಧವೇ ಟೀಕೆ ಮಾಡುತ್ತಾರೆಂದು ಎಣಿಸಿರಲಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

`ಪೋಷಾಕಾಂಶ ನೀಡುವಲ್ಲಿ ವ್ಯತ್ಯಾಸವಾಗಿರುವುದೇ ನಮ್ಮ ಈ ಸ್ಥಿತಿಗೆ ಕಾರಣ. ಹೊಸ ಫಿಸಿಯೊನಿಂದ ನಮಗೆ ಕೆಟ್ಟ ಹೆಸರು ಬಂದಿದೆ' ಎಂದು ಜಮೈಕಾದ ಅಥ್ಲೀಟ್‌ಗಳು ದೂರಿದ್ದರು. ಕ್ಸುರೆಬ್ ಅವರನ್ನು ಪೊಲೀಸರು ಈಗಾಗಲೇ ತನಿಖೆಗೆ ಒಳಪಡಿಸಿದ್ದಾರೆ. `ಅಥ್ಲೀಟ್‌ಗಳಿಗೆ ನಾನು ಯಾವುದೇ ಮೋಸ ಮಾಡಿಲ್ಲ' ಎಂದು ಕ್ಸುರೆಬ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT