ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾಗ್ಲೈಡರ್ ಮೂಲಕ ಮತದಾರರ ಜಾಗೃತಿ

Last Updated 23 ಏಪ್ರಿಲ್ 2013, 8:57 IST
ಅಕ್ಷರ ಗಾತ್ರ

ವಿಜಾಪುರ: ರೋಮಾಂಚನಕಾರಿ ಪ್ಯಾರಾ ಗ್ಲೈಡರ್ ಹಾರಾಟದ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಗರದಲ್ಲಿ ನಡೆಯಿತು.
ಇಲ್ಲಿಯ ಸೈನಿಕ ಶಾಲೆಯ ಆವರಣದಲ್ಲಿ ಈ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಭಾನುವಾರ ಸಂಜೆ ಚಾಲನೆ ನೀಡಿದರು.

ಪ್ಯಾರಾಗ್ಲೈಡರ್  ತಂಡದ ಮುಖ್ಯಸ್ಥ ನಿಕಲಾಯ್‌ಸಿಂಗ್ ಅವರು, ಪ್ಯಾರಾಗ್ಲೈಡರ್‌ನ್ನು ಚಾಲನೆ ಮಾಡುತ್ತ ಇಲ್ಲಿಯ ಗೋಲಗುಮ್ಮಟ ಸೇರಿದಂತೆ ಐತಿಹಾಸಿಕ ಸ್ಮಾರಕಗಳು, ನಗರದ ವಿವಿಧ ಚೌಕ್‌ಗಳು, ಹಾಗೂ ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಸುತ್ತುವರಿದು ಮತದಾರರ ಜಾಗೃತಿಯ ಬೃಹತ್ ಬ್ಯಾನರ್ ಪ್ರದರ್ಶಿಸಿದರು. ಜೊತೆಗೆ ಪ್ರತಿಜ್ಞಾವಿಧಿಯ ಕರಪತ್ರಗಳನ್ನು ಚೆಲ್ಲುವುದರ ಮೂಲಕ `ಬನ್ನಿ ಮತ ಚಲಾಯಿಸೋಣ' ಎಂಬ ಜಾಗೃತಿ ಅಭಿಯಾನಕ್ಕೆ ಇಂಬು ನೀಡಿದರು.

ಕೇವಲ ಎರಡು ರಾಡ್, ಹಿಂಬದಿಯಲ್ಲಿ ಒಂದು ಫ್ಯಾನ್, ಮೂರು ಚಕ್ರಗಳನ್ನೊಳಗೊಂಡ ಸೈಕಲ್ ಮಾದರಿಯ 455 ಕೆ.ಜಿ. ಭಾರದ ಪ್ಯಾರಾಗ್ಲೈಡರ್ ಮೇಲೆ ಪ್ಯಾರಾಚೂಟ್‌ನ್ನು ಅಳವಡಿಸಿಕೊಂಡು, ಬಾನಂಗಳದಲ್ಲಿ ಸತತ ಮೂರು ಗಂಟೆಗಳ ಕಾಲ ಹಾರಾಟ ನಡೆಸಿದರು.

ನೆಲದಿಂದ 5 ಅಡಿಯಿಂದ 18 ಸಾವಿರ ಅಡಿ ಎತ್ತರವರೆಗೆ ಹಾರಬಲ್ಲ ಸಾಮರ್ಥ್ಯವುಳ್ಳ ಈ ಪ್ಯಾರಾಗ್ಲೈಡರ್ ಐತಿಹಾಸಿಕ ನಗರಿಯ ಮತದಾರರಲ್ಲಿ ಕುತೂಹಲ ಮೂಡಿಸಿತು.

ಚುನಾವಣಾ ಆಯೋಗ ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ಮತದಾರರ ಜಾಗೃತಿಗಾಗಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಇದರ ಭಾಗವಾಗಿ ಪ್ಯಾರಾಗ್ಲೈಡರ್ ಬಳಸಿಕೊಳ್ಳುವುದರ ಮೂಲಕ ಮತದಾರರ ಜಾಗೃತಿಗೆ ಹೆಚ್ಚು ಮೆರುಗು ನೀಡಿದೆ ಎಂದು ಜಿಲ್ಲಾ `ಸ್ವೀಪ್' ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ್ ಹೇಳಿದರು.

ಚುನಾವಣಾ ಸಾಮಾನ್ಯ ವೀಕ್ಷಕ ರಾಮಕೃಷ್ಣ, ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ಆರ್. ಬಾಲಾಜಿ, ಉಪ ವಿಭಾಗಾಧಿಕಾರಿ ಡಾ. ಬೂದೆಪ್ಪ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT