ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಫಲಾಪೇಕ್ಷೆ ಇಲ್ಲದ ಸೇವೆಯಿಂದ ಸಂತಸ

Last Updated 8 ಅಕ್ಟೋಬರ್ 2012, 8:35 IST
ಅಕ್ಷರ ಗಾತ್ರ

ಕಡೂರು: ಯಾವುದೇ ಪ್ರತಿಫಲಾ ಪೇಕ್ಷೆ ಇಲ್ಲದೆ ಸೇವೆ ಮಾಡಿದಾಗ ಸಿಗುವ ಆತ್ಮಸಂತೋಷ ಮತ್ತೆ ಯಾವುದರಲ್ಲೂ ಸಿಗುವುದಿಲ್ಲ ಎಂದು ಪಂಚನಹಳ್ಳಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಬಿ.ಎಸ್. ಪಾಂಡುರಂಗಪ್ಪ ತಿಳಿಸಿದರು.

ಪಂಚನಹಳ್ಳಿ ಪದವಿ ಪೂರ್ವ ಕಾಲೇ ಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ದೊಡ್ಡಪ್ಪನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಶಿಬಿರದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸೇವಾ ಶಿಬಿರ ಮಾಡುವ ಮೂಲಕ ಹಳ್ಳಿಗಳಲ್ಲಿ ಸ್ವಚ್ಛ ಪರಿಸರ, ಸಾಮಾಜಿಕ ಬದಲಾವಣೆಗೆ ಹತ್ತಿರವಿರುವ ಕೆಲಸ ಕಾರ್ಯಗಳನ್ನು ಕಡಿಮೆ ಅವಧಿಯಲ್ಲಿ ಪ್ರಾಯೋಗಿಕವಾಗಿ ಗ್ರಾಮಸ್ಥರಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜು ಎಸ್‌ಡಿಎಂಸಿ ಉಪಾಧ್ಯಕ್ಷ ಪಿ.ಎಂ.ಸತೀಶ್ ಮಾತನಾಡಿ, ಶಿಬಿರಾರ್ಥಿ ಗಳು ತಾವು ಕೈಗೊಂಡಿರುವ ಕೆಲಸ, ಕಾರ್ಯಗಳನ್ನು ದೊಡ್ಡಪನಹಳ್ಳಿಯಲ್ಲಿ ನಡೆಸಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ನಿಮ್ಮ ಕೆಲಸಗಳನ್ನು ನೆನಪು ಮಾಡಿಕೊಂಡು ಮುಂದುವರೆಸಿಕೊಂಡು ಹೋಗುವಂತಹ ಕೆಲಸಗಳನ್ನು ಮಾಡಿರಿ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು. 

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎನ್.ಮಹೇಶಪ್ಪ, ಉಪನ್ಯಾಸಕ ವೈ.ಎಂ.ಚನ್ನಯ್ಯ ಗ್ರಾಮ ಸ್ಥರು ಮತ್ತು ಕಾಲೇಜು ವಿದ್ಯಾರ್ಥಿ ಗಳನ್ನು ಕುರಿತು ಮಾತನಾಡಿದರು.

ಡಿ.ವಿ.ಆಶೋಕ್, ಕುಮಾರಪ್ಪ, ಪಿ.ಎಂ.ಪ್ರದೀಪ್, ಶಿಬಿರಾಧಿಕಾರಿ ಸಿದ್ದಪ್ಪ, ತೀರ್ಥಲಿಂಗಪ್ಪ ಮತ್ತು ಗ್ರಾಮಸ್ಥರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT