ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆಗೆ ಮಣಿದ ಸರ್ಕಾರ

Last Updated 7 ಫೆಬ್ರುವರಿ 2012, 8:20 IST
ಅಕ್ಷರ ಗಾತ್ರ

ಮುಂಡರಗಿ: ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾ ಮಠದ ಸಮೀಪ ಮದ್ಯದಂಗಡಿ  ಸ್ಥಳಾಂತರ ಗೊಳಿಸುವಂತೆ ಆಗ್ರಹಿಸಿ ಪಟ್ಟಣದ ಹತ್ತನೇ ವಾರ್ಡ್ ಜನತೆ  ಕಳೆದ 50ದಿನಗಳಿಂದ ಕೈಗೊಂಡಿದ್ದ ಪ್ರತಿಭಟನೆ ಹಿಂದಕ್ಕೆ ಪಡೆದರು. 

 ಸಾರ್ವಜನಿಕರ ಸುದೀರ್ಘ ಪ್ರತಿಭಟನೆಗೆ ಮಣಿದ ಸರಕಾರ ಮದ್ಯದಂಗಡಿ ಸ್ಥಳಾಂತರಿಸುವ ಕುರಿತಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ವಾರ್ಡಿನ ಜನರು ಸೋಮವಾರ ಸಿಹಿ ವಿತರಿಸಿ ಸಂಭ್ರಮಿಸಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಮಠ, ಜಗದ್ಗುರು ಅನ್ನದಾನೀಶ್ವರ ಮಠ, ಶಾಲೆ, ಔಷಧ ಅಂಗಡಿ, ಮಾರುಕಟ್ಟೆ ಪ್ರದೇಶಗಳಿಗೆ ಹತ್ತಿರವಿದ್ದ  ಮದ್ಯದಂಗಡಿಯನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ಸ್ಥಳಾಂತರಿಸಬೇಕೆಂದು ಪಟ್ಟಣದ ಹತ್ತನೇ ವಾರ್ಡಿನ ಜನರು ಪಟ್ಟಣದ ವಿವಿಧ ಸಂಘಟನೆಗಳ ಹಾಗೂ ಸಂಘ, ಸಂಸ್ಥೆಗಳ ನೆರವಿನೊಂದಿಗೆ ಕಳೆದ 50ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಪುರಸಭೆ ಸದಸ್ಯ ರಾಮು ಕಲಾಲ  ಸುದ್ದಿಗೋಷ್ಠಿಯಲ್ಲಿ  ಮಾತನಾಡಿ, ಸಾರ್ವಜನಿಕ ಹಿತಸಕ್ತಿಯಿಂದ  ವಾರ್ಡ್ ಜನರು ಕೈಗೊಂಡಿದ್ದ ಪ್ರತಿಭಟನೆಗೆ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ, ಡಾ.ಅನ್ನದಾನೀಶ್ವರ ಸ್ವಾಮೀಜಿ, ಶ್ರಿನಿವಾಸ ಮಾನೆ, ಬಿಜೆಪಿ ಅಧ್ಯಕ್ಷ ಕೆ.ವಿ.ಹಂಚಿನಾಳ, ಜೆಡಿಎಸ್ ಅಧ್ಯಕ್ಷ ಎಂ.ಜಿ.ವಡ್ಡಟ್ಟಿ ಮೊದಲಾದವರೆಲ್ಲ ಭಾಗವಹಿಸಿ ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದ ತಿಳಿಸಿದರು.

 ಮದ್ಯ ಮಾರಾಟ ಕುರಿತಂತೆ ಸರಕಾರ ಅಬಕಾರಿ ಇಲಾಖೆಗೆ ನಿಗದಿತ ಗುರಿಯನ್ನು ನೀಡಿದ್ದು, ಇಲಾಖೆಯು ನಿಗದಿತ ಗುರಿಯನ್ನು ತಲುಪುವ ಉದ್ದೇಶದಿಂದ ಅಕ್ರಮ ಮದ್ಯ ಮಾರಾಟಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ ಎಂದು ಅವರು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲೂ ಅಕ್ರಮ ಮದ್ಯ ಮಾರಾಟ ನಿರಾತಂಕವಾಗಿ ನಡೆದಿದ್ದು, ಅಬಕಾರಿ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ಅಂಥವರ ವಿರುದ್ಧ ಕಠಿಣಕ್ರಮ ಕೈಗೊಂಡು ಸಾಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕು ಎಂದು  ಮನವಿ ಮಾಡಿದರು.

ಮದ್ಯ ಮಾರಾಟ ಮತ್ತು ಅನುಮತಿ ನೀಡುವ ಕುರಿತಂತೆ ಸರಕಾರ ಸಿಎಲ್-2, ಸಿಎಲ್-9 ಗಳನ್ನು ಒಳಗೊಂಡಂತೆ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು. ಗ್ರಾಮೀಣ ಭಾಗಗಳಲ್ಲಿ ಅಕ್ರಮ ಸಾರಾಯಿ ಮಾರಟ ಹಾಗೂ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಮದ್ಯ ಮಾರಾಟ ಮಾಡುವ ವಿಷಯ ತಮ್ಮ ಗಮನಕ್ಕೆ ಬಂದ ತಕ್ಷಣ ಸಾರ್ವಜನಿಕರೊಡನೆ ಪ್ರತಿಭಟನೆ ನಡೆಸಲಾಗುವುದು ಎಂದು  ಎಚ್ಚರಿಸಿದರು. 

 ಜಾಜಪ್ಪ ಕಲಾಲ, ಅನಂತಪ್ಪ ಕಲಾಲ, ಎ.ಪಿ.ದಂಡಿನ, ಅಮೀನಸಾಬ್ ದಂಡಿನ, ಹನುಮಂತ ಕಲಾಲ, ರಾಮಣ್ಣ ಅಳವುಂಡಿ, ಮಾರುತಿ ಕಲಾಲ, ಲಕ್ಷ್ಮಣ ಕರಡಿಕೊಳ್ಳ, ದುರುಗೋಜಿ ಕಲಾಲ, ಚಿದಾನಂದಪ್ಪ ಅಳವುಂಡಿ, ರಮೇಶ ಸಂಪಿಗೆ, ಹನುಮಥ ಅಳವುಂಡಿ, ಸಲಾಲುದ್ದೀನ ತಳಗಡೆ, ಜಾಫರಸಾಬ್ ಸುಂಕದ, ದಾಲಸಾಬ್ ಕರ್ನಾಚಿ, ಎಸ್.ಡಿ.ಮಕಾಂದಾರ, ಸುರೇಶ ಮಾಳಿಗಿಮನಿ, ಅಲ್ಲಾಭಕ್ಷಿ ಕರ್ನಾಚಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT