ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಭೇಟಿ: ಜಿಯಾಗೆ ಆಹ್ವಾನ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಢಾಕಾ (ಐಎಎನ್‌ಎಸ್): ಪ್ರಧಾನಿ ಮನಮೋಹನ್ ಸಿಂಗ್ ಅವರ ಬಾಂಗ್ಲಾದೇಶ ಪ್ರವಾಸದ ಸಂದರ್ಭದಲ್ಲಿ, ಬಾಂಗ್ಲಾದೇಶದ ವಿರೋಧ ಪಕ್ಷದ ನಾಯಕಿ ಹಾಗೂ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಕ್ಷ (ಬಿಎನ್‌ಪಿ)ದ ಅಧ್ಯಕ್ಷೆ ಖಲೀದಾ ಜಿಯಾ ಅವರನ್ನು ಪ್ರಧಾನಿ ಭೇಟಿಗೆ ಇಲ್ಲಿಯ  ಭಾರತೀಯ ಹೈ ಕಮಿಶನರ್ ರಜೀತ್ ಮಿತ್ತರ್ ಅವರು ಆಹ್ವಾನಿಸಿದ್ದಾರೆ. 

 ಮಂಗಳವಾರ ಹಾಗೂ ಬುಧವಾರ ಯೋಜಿತವಾಗಿರುವ ಪ್ರಧಾನಿಯ ಬಾಂಗ್ಲಾದೇಶ್ ಭೇಟಿಯನ್ನು ಖಲೀದಾ ಸ್ವಾಗತಿಸಿದ್ದಾರೆ. ಇದೇ ಮೊದಲ ಸಲ ಬಾಂಗ್ಲಾ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಲು ಭಾರತ ಆಸಕ್ತಿ ವಹಿಸಿದೆ. ಈ ಭೇಟಿಯು ಎರಡೂ ದೇಶಗಳ ಜನತೆಗೆ ಒಳಿತಾಗುವಂತಹ ಫಲಿತಾಂಶಗಳನ್ನೇ ತರಲಿ ಎಂದು ಬಿಎನ್‌ಪಿಯ ಉಪಾಧ್ಯಕ್ಷ ಶಮಶೇರ್ ಮೊಬಿನ್‌ಚೌಧರಿ ತಿಳಿಸಿದ್ದಾರೆ. ಬುಧವಾರ ಈ ಭೇಟಿಯನ್ನು ಆಯೋಜಿಸಲಾಗಿದ್ದು, ಪಕ್ಷದ ಪ್ರಮುಖ ಮುಖಂಡರು ಸಹ ಈ ಸಂದರ್ಭದಲ್ಲಿ ಹಾಜರಿರುವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT