ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೌಢಶಾಲಾ ಶಿಕ್ಷಕರ ನೇಮಕಾತಿ: ಅನೇಕ ಪದವೀಧರರಿಗೆ ಅನ್ಯಾಯ

Last Updated 16 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

2012ನೇ ಸಾಲಿನಲ್ಲಿ ಕರ್ನಾಟಕ ಶಿಕ್ಷಣ ಇಲಾಖೆಯು 3407 ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು ಇದರಲ್ಲಿ ಶೇಕಡಾ 20ರಷ್ಟು ಪದವಿ ಮತ್ತು ಶೇಕಡಾ 10ರಷ್ಟು ಬಿಇಡಿ ಅಂಕಗಳನ್ನು ಪರಿಗಣಿಸುತ್ತಿದ್ದು ಇದರಿಂದ ಅತಿ ಹೆಚ್ಚು ಅಂಕಗಳನ್ನು ಸಿಇಟಿ ಯಲ್ಲಿ ಗಳಿಸಿದರೂ ಕೂಡ ಆಯ್ಕೆಯಾಗಲು ಸಾಧ್ಯವಾಗುತ್ತಿಲ್ಲ.
 
ಕಾರಣ 2005ರವರೆಗೆ ಪದವಿಯ ಪರೀಕ್ಷಾ ಪದ್ಧತಿಯು `ನಾನ್ ಸೆಮಿಸ್ಟರ್~ ಆಗಿದ್ದು ಅಲ್ಲಿಯ ತನಕ ಅಧ್ಯಯನ ಮಾಡಿದ ಪದವೀಧರರ ಶೇಕಡಾ ಅಂಕವು ಕಡಿಮೆ ಆಗಿರುತ್ತದೆ. 2005ರ ನಂತರ ಎಲ್ಲಾ ವಿಶ್ವ ವಿದ್ಯಾಲಯವು ಸೆಮಿಸ್ಟರ್ ಪದ್ಧತಿಯನ್ನು ಪರಿಚಯಿಸಿದ್ದು ಇದರಲ್ಲಿ ಇಂಟರ್ನಲ್ ಅಂಕಗಳನ್ನು ಅತಿ ಹೆಚ್ಚು ನೀಡಲಾಗುತ್ತಿದ್ದು ಇವರ ಶೇಕಡಾ ಅಂಕ ಗಳಿಸುವಿಕೆಯ ಪ್ರಮಾಣವು ಶೇಕಡಾ 80 ಕ್ಕಿಂತ ಅಧಿಕವಾಗಿರುವುದರಿಂದ ಹಿಂದೆ ಅಧ್ಯಯನ ಮಾಡಿದ ಪದವೀಧರರಿಗೆ ಹಾಗೂ ಗ್ರಾಮೀಣ ಪ್ರದೇಶದ ಲಕ್ಷಾಂತರ ಪದವೀಧರರಿಗೆ  ನೇಮಕಾತಿ ಒಳಗಡೆ ಆಯ್ಕೆಯಾಗಲು ಸಾಧ್ಯವಾಗುತ್ತಿಲ್ಲ.

ಕಾರಣ ಸರ್ಕಾರ ಮತ್ತು ಇಲಾಖೆಯು ಲಕ್ಷಾಂತರ ಪದವೀಧರರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು  ಶಿಕ್ಷಕರ ನೇಮಕಾತಿಯಲ್ಲಿ ನ್ಯಾಯ ಒದಗಿಸಬೇಕು. ಇಂದು ಭಾರತದ ಯಾವುದೇ ಸರ್ಕಾರಿ ಸೇವೆಗೆ ಸೇರುವುದಾದರೂ ಇಲಾಖೆಯು ನಡೆಸಿದ ಪರೀಕ್ಷೆಯ ಅಂಕವೇ ಅಂತಿಮವಾಗಿರುತ್ತದೆ.

ಉದಾಹರಣೆಗೆ, ಕೆಎಎಸ್, ಕೆಇಎಸ್, ಪಿಯು ಕಾಲೇಜ್ ಉಪನ್ಯಾಸಕರು , ಎಫ್ ಡಿ.ಎ, ಪೋಲಿಸ್ ಇನ್‌ಸ್ಪೆಕ್ಟರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಇತ್ಯಾದಿ ನೇಮಕಾತಿ ಪರೀಕ್ಷೆಯಲ್ಲಿ  ಕರ್ನಾಟಕ ಲೋಕ ಸೇವಾ ಆಯೋಗವು ಆಯ್ಕೆ ಮಾಡುವ ಪದ್ಧತಿಯಂತೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಬೇಕು ಎಂದು ಎಲ್ಲಾ ಬಿಇಡಿ ಪದವೀಧರರ ಪರವಾಗಿ ಸರ್ಕಾರಕ್ಕೆ ಈ ಮೂಲಕ ಮನವಿ ಮಾಡುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT