ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ತರಬೇತಿ: ಸಚಿವ

Last Updated 21 ಮಾರ್ಚ್ 2011, 8:20 IST
ಅಕ್ಷರ ಗಾತ್ರ

ಮೈಸೂರು: ‘ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ವಭಾವಿ ಪರೀಕ್ಷೆ ಹಾಗೂ ಹಿಂದಿನ ಪರೀಕ್ಷೆಗಳಲ್ಲಿ 20 ರಿಂದ 30 ಅಂಕಗಳನ್ನು   ಪಡೆದಿರುವ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, ಇಂತಹ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿ ಉತ್ತೀರ್ಣರಾಗುವಂತೆ ಮಾಡಲು  ಕಲಿಕಾ ಕೇಂದ್ರವನ್ನು ತೆರೆದು ನುರಿತ ಶಿಕ್ಷಕರಿಂದ ತರಬೇತಿ ಕೊಡಿಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.

ನಗರದ ನಟರಾಜ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಮೈಸೂರು ನಗರ ದಕ್ಷಿಣ ವಲಯದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರಕ ಕಲಿಕಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.‘ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿನ ಕಲಿಕಾ ಕೇಂದ್ರಗಳಲ್ಲಿ 10 ಸಾವಿರ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಗಣ ನೀಯವಾಗಿ ಕುಸಿದಿರುವ ಎಸ್ಸೆಸ್ಸೆಲ್ಸಿ ಫಲಿತಾಂಶ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ತರಬೇತಿ ಕೊಡಿಸಲಾಗಿದೆ. ವಿದ್ಯಾರ್ಥಿಗಳು ಕ್ಲಿಷ್ಟ ವಿಷಯ ಗಳಲ್ಲಿನ ಗೊಂದಲಗಳನ್ನು ಇಲ್ಲಿ ಸುಲಭವಾಗಿ ನಿವಾರಿಸಿಕೊಳ್ಳಬಹುದು. 10 ದಿನ ನಡೆಯುವ ಪೂರಕ ಕಲಿಕೆ ಶಿಬಿರದಲ್ಲಿ ವಿದ್ಯಾರ್ಥಿಗಳು ಗಮ ನವಿಟ್ಟು ಅಧ್ಯಯನ ಮಾಡಿದರೆ ಖಂಡಿತ ಉತ್ತೀರ್ಣರಾಗಬಹುದು’ ಎಂದು ಉತ್ತೇಜಿಸಿದರು.

‘ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಿಸಿ ಅವರಲ್ಲಿ ಆತ್ಮವಿಶ್ವಾಸ ಹುಟ್ಟಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ವಿದ್ಯಾರ್ಥಿಗಳೂ  ಆಸಕ್ತಿಯಿಂದ ಅಭ್ಯಸಿಸುತ್ತಿದ್ದಾರೆ. ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತೇವೆ ಎಂಬ ಭರವಸೆ ಅವರಲ್ಲಿ ಮೂಡಿದೆ. ಮುಂದಿನ ಬಾರಿ ಅರ್ಧ  ವಾರ್ಷಿಕ ಪರೀಕ್ಷೆ ಮುಗಿದ ತಕ್ಷಣ ಕಲಿಕೆಯಲ್ಲಿ ಹಿಂದೆ ಬಿದ್ದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

‘ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ –ಕಲಿಯುತ್ತಿರುವವರಲ್ಲಿ ಯಾವುದೇ ತರಬೇತಿ ನೀಡಿದರೂ ಉತ್ತೀರ್ಣರಾಗದಂತಹ 4 ಸಾವಿರ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, 10ನೇ ತರಗತಿ ಕಲಿಯುತ್ತಿದ್ದರೂ ಮಗ್ಗಿ ಬರುವುದಿಲ್ಲ, ಕನ್ನಡ, ಇಂಗ್ಲಿಷ್ ವ್ಯಾಕ ರಣದ ಅರಿವು ಇಲ್ಲದಿರುವುದು ದಿಗ್ಭ್ರಮೆ ಮೂಡಿಸಿದೆ. ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಫಲಿತಾಂಶ ಬರುವ ಶಾಲೆಗಳ ಶಿಕ್ಷಕರ ಮೇಲೆ  ಕ್ರಮ ಕೈಗೊಳ್ಳಲಾಗುವುದು. ಹೆಚ್ಚು ಫಲಿತಾಂಶ ಪಡೆದ ಶಾಲೆಗಳು ಮತ್ತು ಅದಕ್ಕೆ ಕಾರಣರಾದ ಶಿಕ್ಷಕರನ್ನು ಸನ್ಮಾನಿಸಲಾಗುವುದು’ ಎಂದು  ಹೇಳಿದರು.

ಜಿಪಂ ಉಪಾಧ್ಯಕ್ಷ ಡಾ.ಶಿವರಾಮ ಮಾತನಾಡಿ, ‘ಇನ್ನು ಕೆಲದಿನ ಮುಂಚಿತವಾಗಿ ಈ ತರಬೇತಿ ಆರಂಭಿಸಿದ್ದರೆ ವಿದ್ಯಾರ್ಥಿಗಳಿಗೆ ಬಹಳ  ಅನುಕೂಲವಾಗುತ್ತಿತ್ತು.ಬುದ್ಧಿವಂತರ ಸ್ನೇಹ ಸಂಪಾದಿಸಿ ವಿಷಯಗಳಲ್ಲಿನ ಗೊಂದಲಗಳನ್ನು ಅವರಿಂದಲೂ ಪರಿಹರಿಸಿಕೊಳ್ಳಬಹುದು’ ಎಂದು  ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ದಕ್ಷಿಣ ವಲಯ ಬಿಆರ್‌ಪಿ ಎ.ಎಂ.ಗುರುಸ್ವಾಮಿ ಸ್ವಾಗತಿಸಿದರು. ದಕ್ಷಿಣ ವಲಯ ಬಿಇಓ ಆರ್.ರಘನಂದನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ಧವೀರಪ್ಪ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿದರು. ಡಿಡಿಪಿಐ  ನಾಗೇಂದ್ರ ಕುಮಾರ್, ತಾಪಂ ಸದಸ್ಯ ಎಲ್.ಆರ್.ಮಹದೇವಸ್ವಾಮಿ, ಸಿಆರ್‌ಪಿ ಆರ್.ರಾಮಾರಾಧ್ಯ, ಸಿಆರ್‌ಪಿ ಎನ್.ಸುರೇಶ್, ಬಿಇಓ ಡಾ. ಕಾಂತಾ, ಪಾಲಿಕೆ ಸದಸ್ಯ ಜಯಶಂಕರಸ್ವಾಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT