ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲಿಪ್ಪೀನ್ಸ್‌ ಮೆಗನ್‌ಗೆ ವಿಶ್ವಸುಂದರಿ ಪಟ್ಟ

Last Updated 30 ಸೆಪ್ಟೆಂಬರ್ 2013, 6:57 IST
ಅಕ್ಷರ ಗಾತ್ರ

ಬಾಲಿ (ಪಿಟಿಐ): ಫಿಲಿಪ್ಪೀನ್ಸ್‌ ಸುಂದರಿ  ಮೆಗನ್‌ ಯಂಗ್‌ ಅವರು 2013ನೇ ಸಾಲಿನ ವಿಶ್ವಸುಂದರಿಯಾಗಿ ಆಯ್ಕೆ­ಯಾ­ಗಿ­­ದ್ದಾರೆ. ಜಗತ್ತಿನ ವಿವಿಧ ರಾಷ್ಟ್ರಗಳ 130 ಸ್ಪರ್ಧಿಗಳನ್ನು ಹಿಂದಿಕ್ಕಿ 23 ವರ್ಷದ ಯಂಗ್‌ ಕಿರೀಟವನ್ನು ಮುಡಿ­ಗೇರಿಸಿ­­ಕೊಂಡಿದ್ದಾರೆ.

ಮಿಸ್‌ ಫಿಲಿಪ್ಪೀನ್ಸ್ ಒಬ್ಬರು ವಿಶ್ವ­ಸುಂದರಿ­ಯಾಗಿ ಆಯ್ಕೆಯಾಗುತ್ತಿರು­ವುದು ಇದೇ ಮೊದಲು. ಇಂಡೊನೇಷ್ಯಾದ ಬಾಲಿಯಲ್ಲಿ ನಡೆದ  63ನೇ ವಿಶ್ವಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಆಯ್ಕೆಯಾಗುತ್ತಿದ್ದಂತೆ ಮೆಗನ್‌ ಭಾವೋದ್ವೇಗಕ್ಕೆ ಒಳಗಾದರು.

ಚಿತ್ರನಿರ್ಮಾಣ ವಿಷಯದಲ್ಲಿ ಅಧ್ಯಯನ ನಡೆಸುತ್ತಿರುವ 23 ವರ್ಷದ ಮೆಗನ್‌ ಯಂಗ್‌ ಅವರು 2012ನೇ ಸಾಲಿನ ವಿಶ್ವಸುಂದರಿ ಚೀನಾದ ವೆಂಕ್ಸಿಯಾ ಯು ಅವರಿಂದ  ಪಟ್ಟವನ್ನು ಪಡೆದಿದ್ದಾರೆ. ಭಾರತದಿಂದ ಸ್ಪರ್ಧಿಸಿದ್ದ ನವನೀತ್‌ ಕೌರ್‌ ಧಿಲ್ಲಾನ್‌ ಅವರು ಮೊದಲ ಹತ್ತು ಸುಂದರಿಯರ ಪಟ್ಟಿಯಲ್ಲಿ ಸ್ಥಾನ ಪಡೆಯಲೂ ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT