ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಾಜ್: ಹೊಸ ವಾಹನ ಮಾರುಕಟ್ಟೆಗೆ

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಿಕೆ ಕಂಪೆನಿ ಬಜಾಜ್ ಆಟೊ, ನಾಲ್ಕು ಚಕ್ರಗಳ ನಗರ ಸಾರಿಗೆ ವಾಹನ `ಆರ್‌ಇ60~ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.  ವರ್ಷಾಂತ್ಯಕ್ಕೆ ಈ ವಾಹನ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

ಈ ಮೊದಲು 2008ರಲ್ಲಿ ಕಂಪೆನಿ ರೆನಾಲ್ಟ್-ನಿಸಾನ್ ಸಭಾಗಿತ್ವದಲ್ಲಿ ಚಿಕ್ಕ ಕಾರೊಂದನ್ನು ತಯಾರಿಸುವ ಯೋಜನೆ ರೂಪಿಸಿತ್ತು. ಆದರೆ, ಬೆಲೆ ನಿಗದಿ ಮತ್ತು ವಿನ್ಯಾಸದ ವಿಚಾರದಲ್ಲಿ ಕಂಪೆನಿಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಅದನ್ನು ಕೈಬಿಡಲಾಗಿತ್ತು.

`ಆರ್‌ಇ60~ ಈ ಯೋಜನೆಯ ಮುಂದುವರೆದ ಭಾಗದಂತೆ ಹೊರಬಂದಿದೆ. ತ್ರಿಚಕ್ರ ವಾಹನ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊಸ ವಾಹನ ಪರಿಚಯಿಸುತ್ತಿದ್ದೇವೆ ಎಂದು ಬಜಾಜ್ ಆಟೊನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ತಿಳಿಸಿದ್ದಾರೆ. 

200 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿರುವ `ಆರ್‌ಇ60~ 35 ಕಿ.ಮೀ ಇಂಧನ ಸಾಮರ್ಥ್ಯ ಹೊಂದಿದ್ದು, ಗಂಟೆಗೆ 70 ಕಿ.ಮೀ  ವೇಗದ ಮಿತಿ ಹೊಂದಿದೆ. ಕಡಿಮೆ ಇಂಗಾಲ ಉಗುಳುವ ಪರಿಸರ ಸ್ನೇಹಿ ತಂತ್ರಜ್ಞಾನ ಅಳವಡಿಸಲಾಗಿದೆ. ವಾಹನ ತಯಾರಿಕೆ ಮತ್ತು ಮಾರಾಟಕ್ಕಾಗಿ ರೆನಾಲ್ಟ್-ನಿಸಾನ್ ಕಂಪೆನಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ  ಎಂದು ರಾಜೀವ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT