ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದಿಂದ ಪ್ರತಿಭೆ ಕುಂದದಿರಲಿ: ಕಣವಿ

Last Updated 14 ಫೆಬ್ರುವರಿ 2012, 9:40 IST
ಅಕ್ಷರ ಗಾತ್ರ

ಮೂಡಲಗಿ: `ಬಡತನದ ಕಾರಣವೊಡ್ಡಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಜ್ಞಾನಾರ್ಜನೆಯನ್ನು ಮೊಟಕುಗೊಳಿಸಿಕೊಳ್ಳಬಾರದು~ ಎಂದು ಸೋಮಯ್ಯ ಶುಗರ್ಸ್‌ದ ಗ್ರಾಮೀಣ ವಿಕಾಸ ಕೇಂದ್ರದ ಸಂಯೋಜನಾಧಿಕಾರಿ ಡಾ. ವಿಜಯಕುಮಾರ ಕಣವಿ ಹೇಳಿದರು.

ಇಲ್ಲಿಯ ರೂರಲ್ ಡೆವೆಲೆಪಮೆಂಟ್ ಸೊಸಾಯಿಟಿಯ ಸಮಾಜ ಕಾರ್ಯ ಕಾಲೇಜಿನಲ್ಲಿ ಎಬಿವಿಪಿ ಅಧ್ಯಯನ ಕೇಂದ್ರದ ವತಿಯಿಂದ `ವಿದ್ಯಾರ್ಥಿಗಳ ಭವಿಷತ್ತಿನ ಪ್ರಶ್ನೆ~ ಕಾರ್ಯಾಗಾರದ  ಅವರು  ಮಾತಾನಾಡಿದರು.

ವಿದ್ಯಾರ್ಥಿಯು ಕಲಿಕೆಯ ಅವಧಿಯನ್ನು ಸ್ವಲ್ಪವು ಹಾಳು ಮಾಡಿದೆ ಸಾಧನೆಗಾಗಿ ಬಳಸಿಕೊಳ್ಳಬೇಕು ಎಂದರು.
ಬೆಳಗಾವಿ ಜಿಲ್ಲಾ ಎಬಿವಿಪಿ ಗಂಗಾದರ ಬಿಂಗಿ ಮಾತನಾಡಿ ಭಾರತ ದೇಶ ಸದೃಢತೆಯನ್ನು ಸಾಧಿಸಬೇಕಾದರೆ ಸ್ವಾಮಿ ವಿವೇಕಾನಂದರ ಹೇಳಿದ ಆದರ್ಶಗಳನ್ನು ಪಾಲಿಸಿ ಯುವಶಕ್ತಿ ಸದೃಢವಾಗಬೇಕು. ತಮ್ಮ ಭವಿಷ್ಯದ ಜೊತೆಗೆ ದೇಶದ ಬಗ್ಗೆ ಚಿಂತಿಸಬೇಕು ಎಂದರು.

ಪ್ರಾಚಾರ್ಯ ಜಗನ್ನಾಥ ಕೋರಾಡಿ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಅಧ್ಯಕ್ಷ ತಮ್ಮಣ್ಣಾ ಪಾರ್ಶಿ, ಗ್ರಾಮೀಣ ವಿಕಾಸ ಕೇಂದ್ರದ ಯೋಜನಾ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಉಪನ್ಯಾಸಕರಾದ ಶಿವಾನಂದ ಸತ್ತಿಗೇರಿ, ಮಹಾಂತೇಶ ಶೆಟ್ಟರ, ಸಂಗಪ್ಪಾ ಕುಂಬಾರ, ಸಂಜೀವ ವಾಲಿ, ಶಿವಲೀಲಾ ಪೋಳ ಮತ್ತು ಹಣಮಂತ ಮದನ್ನವರ  ಭಾಗವಹಿಸಿದ್ದರು.

ಉಪನ್ಯಾಸಕ ಯಲ್ಲೇಶ ಕೋರಿಶೆಟ್ಟಿ ನಿರೂಪಿಸಿದರು. ಮುತ್ತು ಕಟ್ಟೀಕಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT