ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿದರ ಕಡಿತ ಸಾಧ್ಯತೆ ಶೇ80: ನೊಮುರಾ

Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮೇ 3ರಂದು ಪ್ರಕಟಿಸಲಿರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿ ದರವನ್ನು ಶೇ 0.25ರಷ್ಟು ತಗ್ಗಿಸುವ ಸಾಧ್ಯತೆ ಶೇ  80ರಷ್ಟಿದೆ ಎಂದು ಪ್ರಮುಖ ಷೇರು ದಲ್ಲಾಳಿ ಸಂಸ್ಥೆ `ನೊಮುರಾ' ಹೇಳಿದೆ.

ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ(ಡಬ್ಲ್ಯುಪಿಐ) ಮಾರ್ಚ್‌ನಲ್ಲಿ ಮೂರು ವರ್ಷಗಳ ಹಿಂದಿನ ಮಟ್ಟವಾದ ಶೇ 5.96ಕ್ಕೆ ಕುಸಿದಿದೆ. ಇದರಿಂದ ಈ ಬಾರಿ ಬಡ್ಡಿ ದರ ಕಡಿತ ಸಾಧ್ಯತೆ ಹೆಚ್ಚು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಮತ್ತು ಚಿನ್ನದ ಧಾರಣೆ ಗಣನೀಯವಾಗಿ ತಗ್ಗಿದೆ. ಇದರಿಂದ ಚಾಲ್ತಿ ಖಾತೆ ಕೊರತೆ(ಸಿಎಡಿ) ಅಂತರವೂ ಇಳಿಯಲಿದೆ. ಈ ಸಂಗತಿಯನ್ನೂ `ಆರ್‌ಬಿಐ' ಪ್ರಮುಖವಾಗಿ ಪರಿಶೀಲಿಸಲಿದೆ ಎಂದು ನೊಮರಾ ವಿಶ್ಲೇಷಿಸಿದೆ.

`ಆರ್‌ಬಿಐ' ಮಾ. 18ರಂದು ಪ್ರಕಟಿಸಿದ ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿ ದರವನ್ನು ಶೇ 7.50ರಿಂದ ಶೇ 7.25ಕ್ಕೆ ತಗ್ಗಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT