ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಿ ಇಂಧನ ಮೂಲ ಅಭಿವೃದ್ಧಿ ನೀತಿ ಶೀಘ್ರ

Last Updated 7 ಆಗಸ್ಟ್ 2012, 9:25 IST
ಅಕ್ಷರ ಗಾತ್ರ

ಶಿರಸಿ: ರಾಜ್ಯದಲ್ಲಿ ಪರಿಸರ ಸ್ನೇಹಿ ಬದಲೀ ಇಂಧನ ಮೂಲ ಅಭಿವೃದ್ಧಿ ಪಡಿಸುವ ಕುರಿತಂತೆ ವಿಶೇಷ ನೀತಿ ರೂಪಿಸುವ ಜೊತೆಗೆ ಸೌರವಿದ್ಯುತ್‌ಗೆ ಶೇಕಡಾ 50ರಷ್ಟು ಸಹಾಯಧನ ನೀಡು ವುದಾಗಿ ಮುಖ್ಯಮಂತ್ರಿ ಘೋಷಿಸಿದ್ದು, ಈ ಸೌಲಭ್ಯ ಶೀಘ್ರ ಅನುಷ್ಠಾನ ಗೊಳ್ಳಲಿದೆ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಅಶೀಸರ ಹೇಳಿದರು.

ಅವರು ಇಲ್ಲಿನ ಮಾಡರ್ನ್ ಎಜ್ಯುಕೇಶನ್ ಸೊಸೈಟಿಯ ಚೈತನ್ಯ ಕಾಲೇಜಿನಲ್ಲಿ ಇಕೋ ಕ್ಲಬ್ ವತಿಯಿಂದ ಸೋಮವಾರ ಆಯೋಜಿಸಿದ್ದ ವನಮಹೋತ್ಸವ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪಶ್ಚಿಮಘಟ್ಟ ಕಾರ್ಯಪಡೆ ಮಲೆನಾಡಿನಲ್ಲಿ ಬದಲೀ ಇಂಧನ ಮೂಲ ಬಳಸಿ ಸುರಕ್ಷತೆ ಸಾಧಿಸುವ ಕುರಿತು ಸರ್ಕಾರ ಶಿಫಾರಸು ನೀಡಿದ್ದು, ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸೌರವಿದ್ಯುತ್ ಯೋಜನೆ ಪ್ರೋತ್ಸಾಹಿಸುವುದಾಗಿ ತಿಳಿಸಿದ್ದಾರೆ. ಭವಿಷ್ಯದಲ್ಲಿ ತಲೆದೋರಲಿರುವ ವಿದ್ಯುತ್ ಸಮಸ್ಯೆಗೆ ಪರ್ಯಾಯವಾಗಿ ಮತ್ತು ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯದಿಂದ ಕೃಷಿ ಚಟುವಟಿಕೆಗೆ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಸೌರ ವಿದ್ಯುತ್ ಸಹಕಾರಿಯಾಗಲಿದೆ ಎಂದರು.

ಮಿನಿ ಹೈಡಲ್‌ಗೆ ವಿರೋಧ
ನಾಲ್ಕು ವರ್ಷಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಕಿರು ಜಲವಿದ್ಯುತ್ ಯೋಜನೆಗೆ ಅನುಮತಿ ನೀಡಲಾಗಿಲ್ಲ.

`ಅಕ್ರಮ ಮಿನಿಹೈಡಲ್ ಯೋಜನೆಗೆ ಪಶ್ಚಿಮಘಟ್ಟದಲ್ಲಿ ಅವಕಾಶ ನೀಡುವುದಿಲ್ಲ. ಈ ಕುರಿತು ಇಂಧನ ಮತ್ತು ಅರಣ್ಯ ಇಲಾಖೆಗೆ ಸೂಚನೆ ನೀಡಲಾಗುವುದು ಎಂದು ಮುಖ್ಯಮಂತ್ರಿ  ಎಂದು ಅಶೀಸರ ಹೇಳಿದರು.

ಯುನೆಸ್ಕೋ ಇನ್ನಷ್ಟು ಚರ್ಚೆ ನಡೆಯಲಿ
ಪಶ್ಚಿಮಘಟ್ಟದ ಕೆಲ ಪ್ರದೇಶಗಳನ್ನು ಯುನೆಸ್ಕೋ ಪಟ್ಟಿಗೆ ಸೇರ್ಪಡೆ ಗೊಳಿಸುವ ಪ್ರಸ್ತಾಪ ಕುರಿತಂತೆ ಕೆಲ ಮಾಧ್ಯಮಗಳು ಅತಿರಂಜಿತ ವರದಿ ಮಾಡಿವೆ. ಈ ಕುರಿತು ಇನ್ನಷ್ಟು ಚರ್ಚೆ ನಡೆಯಬೇಕು. ಪಶ್ಚಿಮಘಟ್ಟದಲ್ಲಿ ಬದಲೀ ಇಂಧನ, ಅರಣ್ಯ ನಾಶ, ನದಿ ಮೂಲ ಉಳಿವು ಸೇರಿದಂತೆ ಸಾಕಷ್ಟು ಸಮಸ್ಯೆಗಳಿದ್ದು, ಜನರ ಸಹಭಾಗಿತ್ವದಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ. ಇದನ್ನು ಬಿಟ್ಟು ಒಂದೇ ವಿಷಯದ ಬಗ್ಗೆ ಮಾತ್ರ ವ್ಯಾಪಕ ಚರ್ಚೆಯಾಗುತ್ತಿದೆ ಎಂದರು.

ಎಂಇಎಸ್ ಆಡಳಿತಾಧಿಕಾರಿ ಎಸ್.ಐ.ಭಟ್ಟ, ಕಾಲೇಜ್ ಉಪಸಮಿತಿ ಅಧ್ಯಕ್ಷ ಸದಾನಂದ ಭಟ್ಟ, ಸದಸ್ಯ ದೀಪಕ ದೊಡ್ಡೂರು, ವಲಯ ಅರಣ್ಯಾಧಿಕಾರಿ ಎನ್.ಬಿ.ನಾಯ್ಕ, ಪ್ರಾಚಾರ್ಯ ಆರ್.ಎಂ.ಭಟ್ಟ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT