ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಕಾಮಗಾರಿ ಪರಿಶೀಲನೆ

Last Updated 6 ಜನವರಿ 2012, 8:25 IST
ಅಕ್ಷರ ಗಾತ್ರ

ಸಿರುಗುಪ್ಪ: ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದ್ದು, ಕೃಷಿ ಕೂಲಿಕಾರರು ಗುಳೆ ಹೋಗದಂತೆ ತಡೆಗಟ್ಟುವಲ್ಲಿ ಏನೇನು ಕ್ರಮ ತೆಗೆದುಕೊಂಡೀರಿ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಪ್ರಶ್ನಿಸಿದರು.

ಇಲ್ಲಿಯ ತಾಲ್ಲೂಕು ಪಂಚಾಯಿತಿ ಯಲ್ಲಿ ಗುರುವಾರ ಜರುಗಿದ 5ನೇ ಸಾಮಾನ್ಯ ಸಭೆಯಲ್ಲಿ ಬರ ಕಾಮಗಾರಿ ಗಳ  ಅನುಷ್ಠಾನದ ಬಗ್ಗೆ ಮಾಹಿತಿ ಪಡೆದರು.

ಗ್ರಾಮೀಣ ಪ್ರದೇಶದ ಕೃಷಿ ಕೂಲಿಕಾರರಿಗೆ ಉದ್ಯೋಗವಿಲ್ಲದೇ ಗುಳೆ ಹೋಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಗಡಿಭಾಗದ ರಾವಿಹಾಳು, ಬೀರಳ್ಳಿ ಗ್ರಾಮಗಳ ಜನರು ಬೆಂಗಳೂರಿನತ್ತ ಉದ್ಯೋಗ ಅರೆಸಿ ಗುಳೆ ಹೋಗುತ್ತಿದ್ದಾರೆ, ಆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿಹೊಂಡ, ಕೆರೆ ಹೂಳು ತೆಗೆಸು ವುದು, ಹಲವು ಅಭಿವೃದ್ಧಿ ಕೆಲಸ ಗಳನ್ನು ಕೈಗೆತ್ತಿಕೊಳ್ಳಲು ಶಾಸಕರು ಸಲಹೆ ಮಾಡಿದರು.

ಸರ್ಕಾರ ಇದಕ್ಕಾಗಿ  ಎರಡು ಕೋಟಿ 70 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ, ಅದು ಪೋಲಾಗ ಬಾರದು ಜನರಿಗೆ ಮುಟ್ಟುವಂತೆ ಕ್ರಿಯಾ ಯೋಜನೆಗಳನ್ನು ರೂಪಿಸಿ ಆ ಕುಟುಂಬಗಳಿಗೆ ಉದ್ಯೋಗ ಕೊಡಿ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶಿಸಿದರು.

ತಾಲ್ಲೂಕಿಗೆ ಇಂದಿರಾ ಆವಾಸ್ ಯೋಜನೆಯಡಿ 505 ಮನೆ, ಬಸವ ವಸತಿ ಯೋಜನೆಯಡಿ 1999 ಮನೆ ಗಳು  ಮಂಜೂರಾಗಿದ್ದು ಗ್ರಾಮ ಸಭೆ ನಡೆಸಿ ಆರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಗತಿ ಯಲ್ಲಿದೆ ಎಂದು ತಾ.ಪಂ.ಇ.ಓ ತಿಪ್ಪೇರುದ್ರಪ್ಪ ಸಭೆಯಲ್ಲಿ ಮಾಹಿತಿ ನೀಡಿದರು.

ಸುವರ್ಣ ಭೂಮಿ ಯೋಜನೆಯಡಿ 1468 ರೈತರಿಗೆ ತಲಾ ಐದು ಸಾವಿರ ರೂಪಾಯಿ ಅನುದಾನವನ್ನು ವಿತರಣೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ್ ಇಲಾಖೆಯ ಪ್ರಗತಿ ವಿವರಿಸಿದರು.

2011-12 ನೇ ಸಾಲಿನ ಒಂದನೇ ಕಂತಿನ 13ನೇ ಹಣಕಾಸು ಯೋಜನೆ ಕ್ರಿಯಾ ಯೋಜನೆಯಡಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಡೆಸ್ಕ್ - ಬೆಂಚು ಸರಬರಾಜು ಮಾಡಲು 31.21 ಲಕ್ಷ ರೂಪಾಯಿ ಅನುದಾನಕ್ಕೆ ಸಭೆ ಅನುಮೋದನೆ ನೀಡಿತು.

ಬಳ್ಳಾರಿಗೆ ಹೆರಿಗೆ: ಗ್ರಾಮೀಣ ಪ್ರದೇಶ ದಿಂದ ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಬಂದ ಗರ್ಭಿಣಿಯರನ್ನು ಬಳ್ಳಾರಿಗೆ ಕಳಿಸಿಕೊಡುತ್ತಿರುವ ವೈದ್ಯರ ಬಗ್ಗೆ ತಾ.ಪಂ.ಸದಸ್ಯ ರಾಮಾ ನಾಯಕ್ ಸಭೆಯಲ್ಲಿ ಪ್ರಸ್ತಾಪಿಸಿ ಗಮನಸೆಳೆದರು.

ಆಸ್ಪತ್ರೆಯಲ್ಲಿ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದರೂ ಗರ್ಭಿಣಿಯರನ್ನು ಖಾಸಗಿ ಆಸ್ಪತ್ರೆಗೆ ಮತ್ತು ಬಳ್ಳಾರಿಗೆ ಹೆರಿಗೆಗೆ ಕಳಿಸುತ್ತಿ ರುವ ವೈದ್ಯರ ನಿರ್ಲಕ್ಷತನ ಬಗ್ಗೆ ಮಾಹಿತಿ ಕೊಡಿ ಎಂದು  ಸಭೆಯಲ್ಲಿದ್ದ ಆರೋಗ್ಯಾಧಿಕಾರಿಗಳಲ್ಲಿ ಕೋರಿದರು.

ತಾ.ಪಂ.ಅಧ್ಯಕ್ಷೆ ಲಕ್ಷ್ಮಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಂಜಿನಪ್ಪ, ತಹಸೀಲ್ದಾರ್ ಎಂ.ಎನ್. ಮಂಜುನಾಥ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT