ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಅ. 16 ರಿಂದ ‘ಕಲ್ಯಾಣ ಪರ್ವ’

Last Updated 14 ಸೆಪ್ಟೆಂಬರ್ 2013, 6:16 IST
ಅಕ್ಷರ ಗಾತ್ರ

ಬಸವ­­ಕಲ್ಯಾಣ: ಇಲ್ಲಿ ಅಕ್ಟೋ­­ಬರ್ 16, 17 ಮತ್ತು 18 ರಂದು ಕೂಡಲ ಸಂಗಮ ಬಸವಧರ್ಮ ಪೀಠದ ಜಗದ್ಗುರು ಮಾತೆ ಮಹಾದೇವಿ ನೇತೃತ್ವದಲ್ಲಿ 12 ನೇ ಕಲ್ಯಾಣ ಪರ್ವ ನಡೆಯಲಿದೆ ಎಂದು ದೆಹಲಿಯ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಸಸ್ತಾಪುರ ರಸ್ತೆಯಲ್ಲಿನ ಬಸವ ಮಹಾಮನೆಯಲ್ಲಿ ಈಚೆಗೆ ಹಮ್ಮಿ­ಕೊಂಡ ಲಿಂ.ಜಗದ್ಗುರು ಲಿಂಗಾ­ನಂದ ಸ್ವಾಮೀಜಿ ಸ್ಮರಣೋತ್ಸವ ಮತ್ತು ಕಲ್ಯಾಣ ಪರ್ವದ ಪೂರ್ವ­ಭಾವಿ ಸಭೆಯಲ್ಲಿ ಮಾತ­ನಾಡಿದರು.

ಕಾರ್ಯಕ್ರಮದ ಪ್ರಚಾರಕ್ಕಾಗಿ ರಾಜ್ಯದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ 8 ತಂಡಗಳನ್ನು ರಚಿಸಲಾಗಿದೆ ಎಂದರು. ಬಸವಣ್ಣ ಎಂದರೆ ನಂದಿ ಎಂದು ಜನರು ನಂಬಿದ್ದ ಕಾಲದಲ್ಲಿ ಲಿಂಗಾನಂದ ಸ್ವಾಮೀಜಿಯವರು ನಾಡಿನಾದ್ಯಂತ ಸತತವಾಗಿ ಪ್ರವಾಸ ಕೈಗೊಂಡು ಪ್ರವಚನ ನಡೆಸಿ ಜನರಲ್ಲಿನ ತಪ್ಪು ಕಲ್ಪನೆಯನ್ನು ದೂರ ಮಾಡಲು ಪ್ರಯತ್ನಿಸಿದರು ಎಂದು ಹೇಳಿದರು.

ಸಿದ್ಧರಾಮೇಶ್ವರ ಸ್ವಾಮೀಜಿ ಮಾತ­ನಾಡಿ ಲಿಂಗಾನಂದ ಅಪ್ಪಗಳ ಮಾತು­ಗಳಲ್ಲಿ ಚುಂಬಕ ಶಕ್ತಿ ಇತ್ತು.   
  ಬಸವಪ್ರಭು ಸ್ವಾಮೀಜಿ, ಲಿಂಗಾಯತ ಧರ್ಮ ಮಹಾಸಭಾ ಅಧ್ಯಕ್ಷ ವಿಶ್ವನಾಥ ದಳಪತಿ, ಆಂಧ್ರಪ್ರದೇಶ ರಾಜ್ಯಾಧ್ಯಕ್ಷ ಧನರಾಜ ಜೀಗರ್, ಶಿವರಾಜ ಪಾಟೀಲ ಅತಿವಾಳ ಮಾತನಾಡಿದರು.

ಚಂದ್ರಪ್ಪ ಪಾಟೀಲ ಗಾದಗಿ, ಶಂಕರೆಪ್ಪ ಪಾಟೀಲ, ಲಕ್ಷ್ಮಿಬಾಯಿ ಪಾಂಡ್ರೆ, ವಿದ್ಯಾಧರ ಕಾಮಶೆಟ್ಟಿ, ಗಿರಿಜಾ ಸಿದ್ಧಣ್ಣ, ಬಸವರಾಜ ಪಾಟೀಲ ಉಪಸ್ಥಿತರಿದ್ದರು. ಬಸವರಾಜ ಸಂಗ­ಮದ ಸ್ವಾಗತಿಸಿದರು. ಆರ್.ಜಿ.ಶೆಟ­ಗಾರ ನಿರೂಪಿಸಿದರು. ನಾಗಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT