ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್: ರಾಹುಲ್ ಬೆಳ್ಳಿ ಸಾಧನೆ

Last Updated 12 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚಿನ್ನದ ಪದಕ ಜಯಿಸುವ ಆಸೆಯನ್ನು ನಿರಾಸೆಗೊಳಿಸಿದ ರಾಹುಲ್ ಪೂನಿಯಾ ಸಿಂಗಪುರದಲ್ಲಿ ನಡೆದ ಯೂತ್ ಕಾಮನ್‌ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.

ಸೋಮವಾರ ನಡೆದ 49 ಕೆ.ಜಿ. ವಿಭಾಗದ ಸ್ಪರ್ಧೆಯ ಫೈನಲ್ ಪಂದ್ಯದಲ್ಲಿ ರಾಹುಲ್ 6-13 ಪಾಯಿಂಟ್‌ಗಳಿಂದ ಇಂಗ್ಲೆಂಡ್‌ನ ಜಾಕ್ ಬಾಟೆಸನ್ ಎದುರು ಸೋಲು ಕಂಡು ಬೆಳ್ಳಿ ಪದಕಕ್ಕೆ ಸಮಾಧಾನ ಪಟ್ಟರು. ಈ ಮೂಲಕ  ಕ್ರೀಡಾಕೂಟದಲ್ಲಿ ಈ ಸಲ ಬೆಳ್ಳಿ ಜಯಿಸಿದ ಏಕೈಕ ಭಾರತದ ಸ್ಪರ್ಧಿ ಎನಿಸಿದರು.

ಉತ್ತಮ ಆರಂಭ ಪಡೆದ ಜಾಕ್ ಇನ್ನೂ ಹೆಚ್ಚು ಅಂತರದಿಂದ ಗೆಲ್ಲುವ ಸಾಧ್ಯತೆ ಇತ್ತು. ಆದರೆ ರಾಹುಲ್ ಅದಕ್ಕೆ ಅವಕಾಶ ನೀಡಲಿಲ್ಲ ಎನ್ನುವುದಷ್ಟೇ ಸಮಾಧಾನ. ರಾಷ್ಟ್ರೀಯ ಚಾಂಪಿಯನ್ ಸುರೇಂದರ್ ಸಿಂಗ್ ಸಹ ಇದೇ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡು ಕಂಚಿನ ಪದಕ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT