ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ತಾ.ಪಂ.ಗೆ ಗಿರಿಜವ್ವ ಅಧ್ಯಕ್ಷೆ

Last Updated 18 ಅಕ್ಟೋಬರ್ 2012, 10:40 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿನ ತಾಲ್ಲೂಕು ಪಂಚಾಯಿತಿಯ ಮೂರನೇ ಅವಧಿಯ ಅಧ್ಯಕ್ಷರಾಗಿ  ಗಿರಿಜವ್ವ ದೇಸಾಯಿ ಹಾಗೂ ಉಪಾಧ್ಯಕ್ಷರಾಗಿ ಶ್ರಿಶೈಲ ಗೌರಿ ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ಹದಿನಾರು ಸದಸ್ಯರನ್ನು ಹೊಂದಿದಿರುವ ತಾಲ್ಲೂಕಾ ಪಂಚಾಯಿತಿಯಲ್ಲಿ 8 ಜನ ಬಿಜೆಪಿ, 7 ಕಾಂಗ್ರೆಸ್, ಒಂದು ಪಕ್ಷೇತರ ಸದಸ್ಯರನ್ನು ಹೊಂದಿದೆ. ಚುನಾವಣೆಯಲ್ಲಿ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ರಾಂಪುರ ಮತಕ್ಷೇತ್ರದ ಗಿರಿಜವ್ವ ದೇಸಾಯಿ ಮತ್ತು ಕಾಂಗ್ರೆಸ್‌ನಿಂದ ರೇಣುಕಾ ದಿವಟಗಿ ನಾಮಪತ್ರ ಸಲ್ಲಿಸಿದ್ದರು.
 
ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದ ಹಿನ್ನಲೆಯಲ್ಲಿ ಬಿಜೆಪಿಯ ಗಿರಿಜವ್ವ ದೇಸಾಯಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿಯ ಮುರನಾಳ ಕ್ಷೇತ್ರದ ಶ್ರಿಶೈಲ ಗೌರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಘೋಷಣೆ ಮಾಡಿದರು.
ಚುನಾವಣೆಯ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಘೋಷಣೆ ಹೊರಬೀಳುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಪಟ್ಟರು.

ನಿಕಟಪೂರ್ವ ಅಧ್ಯಕ್ಷೆ ತಾರಾಬಾಯಿ ಚವ್ಹಾಣ, ಉಪಾಧ್ಯಕ್ಷ ರಾಜಶೇಖರ ಮುದೇನೂರ, ಸಿದ್ದಲಿಂಗೇಶ ಗೋಡಿ,  ಕವಿತಾ ದಡ್ಡಿ, ಸಿದ್ದಪ್ಪ ಕೆ ಟಿಕಲ್, ಶೋಭಾ ಗುಣ್ಣಿ, ನಂದಾ ಹೊಸಮಠ, ಶಿವಪ್ಪ ಖಜ್ಜಿಡೋಣಿ, ತಿಮ್ಮಣ್ಣ ಬಟಕುರ್ಕಿ, ಮುಕ್ಕಣ್ಣ ಲಮಾಣಿ, ಅನಿತಾ ಗುಳೇದ, ಯಲ್ಲವ್ವ ಹಲಗಲಿ,ಹನಮಗೌಡ ಬಿರಾದಾರ, ಸುಶೀಲಾಬಾಯಿ ಲಮಾಣಿ ಮತ್ತಿತರ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ, ಶಿವು ಕನ್ನೂರ, ಕಳಕಪ್ಪ ಬಾದೋಡಗಿ, ಸಂಗಮೇಶ ಗುಡ್ಡದ ಸೇರಿದಂತೆ ಮತ್ತಿತರರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಭೇಟಿಯಾಗಿ ಅಭಿನಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT