ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬಾ ಬಂಧನ ಖಂಡಿಸಿ ಅಂಚೆ ಕಾರ್ಡ್ ಚಳವಳಿ

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

ಮಂಗಳೂರು: ಯೋಗ ಗುರು ಬಾಬಾ ರಾಮ್‌ದೇವ್ ಬಂಧನ ಖಂಡಿಸಿ ಭ್ರಷ್ಟಾಚಾರ ವಿರೋಧಿ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ `ಪ್ರಧಾನ ಮಂತ್ರಿಗೆ ಅಂಚೆ ಕಾರ್ಡ್~ ಚಳವಳಿಗೆ ಬುಧವಾರ ಪಾಂಡೇಶ್ವರ ಪ್ರಧಾನ ಅಂಚೆ ಕಚೇರಿ ಬಳಿ ಚಾಲನೆ ನೀಡಲಾಯಿತು.

ವೇದಿಕೆ ಸಂಚಾಲಕ ಟಿ.ಆರ್.ಭಟ್ ಮಾತನಾಡಿ, ರಾಮ್‌ದೇವ್ ಅವರಿಂದ ಶಾಂತಿಯುತವಾಗಿ  ನಡೆಯುತ್ತಿದ್ದ ಕಪ್ಪುಹಣ ನಿರ್ಮೂಲನಾ ಚಳವಳಿ ಹತ್ತಿಕ್ಕುವ ದುರುದ್ದೇಶದಿಂದ ಕೇಂದ್ರ ಸರ್ಕಾರ ಮಧ್ಯರಾತ್ರಿ ಪೊಲೀಸ್ ಕಾರ್ಯಾಚರಣೆ ಕೈಗೊಂಡಿದ್ದು ಖಂಡನೀಯ ಎಂದರು. 

ಮೊದಲ ಹಂತದಲ್ಲಿ ಸಾರ್ವಜನಿಕರಿಂದ ಒಂದು ಸಾವಿರ ಅಂಚೆ ಕಾರ್ಡ್ ಸಂಗ್ರಹಿಸಲಾಗಿದ್ದು, ಪ್ರಧಾನಮಂತ್ರಿಗೆ ಕಳುಹಿಸಿಕೊಡಲಾಗುವುದು. ಮುಂದಿನ ಮೂರು ದಿನಗಳಲ್ಲಿ ಕರಾವಳಿಯ ನಾಗರಿಕರಿಂದ ಇನ್ನೂ ಹೆಚ್ಚಿನ ಅಂಚೆ ಕಾರ್ಡ್ ಸಂಗ್ರಹ ಕಾರ್ಯ ನಡೆಯಲಿದೆ ಎಂದರು.

ಸಮಿತಿ ಅಧ್ಯಕ್ಷರಾದ ವಿದ್ಯಾ ದಿನಕರ್ ಮಾತನಾಡಿದರು.ಭ್ರಷ್ಟಾಚಾರ ವಿರೋಧಿ ಮಿತಿ ಸದಸ್ಯರಾದ ನಿತ್ಯಾನಂದ ರಾವ್, ಆನಂದ ರಾವ್, ವಾಲ್ಟರ್ ಫರ್ನಾಂಡಿಸ್, ಮನೋಜ್ ಸಲ್ಡಾನಾ, ಭಾಸ್ಕರ್, ಶಂಕರ್ ಶೆಟ್ಟಿ, ಶಬೀರ್, ತೀರ್ಥರಾಂ, ರಾಘವನ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT